ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರು 20-25 ಆಡಿಷನ್ಗಳಲ್ಲಿ ರಿಜೆಕ್ಟ್ ಆಗಿದ್ದಾರಂತೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
‘ನಾನು ಆಡಿಷನ್ನಲ್ಲಿ ರಿಜೆಕ್ಟ್ ಆದ ಬಳಿಕ ಅಳುತ್ತಾ ಮನೆ ಸೇರುತ್ತಿದ್ದೆ. ನಾನು ಸಿನಿಮಾ ಒಂದಕ್ಕೆ ನಿರಂತರವಾಗಿ ಆಡಿಷನ್ ನೀಡಿ ಕೊನೆಯಲ್ಲಿ ಆಯ್ಕೆ ಆದೆ. 2-3 ತಿಂಗಳು ತರಬೇತಿ ಪಡೆದ ನಂತರ ಸಿನಿಮಾ ಕ್ಯಾನ್ಸಲ್ ಆಯಿತು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
‘ಸಿನಿಮಾದಿಂದ ಸಿನಿಮಾಗೆ ಉತ್ತಮ ಆಗಬೇಕು ಎನ್ನುವ ಆಸೆ ನಮ್ಮ ಕೈಯಲ್ಲೇ ಇರುತ್ತದೆ. ನಾನು ನನ್ನ ಸಿನಿಮಾಗಳನ್ನು ನೋಡಿದಾಗ ನಾನು ಇನ್ನೂ ಉತ್ತಮವಾಗಿ ನಟಿಸಬಹುದು ಎಂದನಿಸುತ್ತದೆ’ ಎಂದಿದ್ದಾರೆ ರಶ್ಮಿಕಾ.
‘ಕಿರಿಕ್ ಪಾರ್ಟಿ’ಯಲ್ಲಿ ಅವಕಾಶ ಸಿಕ್ಕಿ ರಶ್ಮಿಕಾ ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದರು. ಬಳಿಕ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಫೇಮಸ್ ಆದರು. ಅವರು ಭಾರತದ ಕ್ರಶ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.
ಡಿಸೆಂಬರ್ 6ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ.
Be the first to comment