Rashmika ರಕ್ಷಿತ್, ರಿಷಬ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ನನಗೆ ಇಂಡಸ್ಟ್ರಿಗೆ ದಾರಿ ತೋರಿಸಿದರು ಎಂದು ಹೇಳುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.

ಅವರ ಈ ಸಂದರ್ಶನ ವೈರಲ್ ಆಗಿದ್ದು ಸಂದರ್ಶಕಿ ಅವರು ನಿಮ್ಮ ಮೊದಲ ಸಿನಿಮಾಗಳ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ, ಪ್ರಾಮಾಣಿಕವಾಗಿ ಹೇಳುವುದಾದರೆ ರಕ್ಷಿತ್ ಹಾಗೂ ರಿಷಬ್ ಅವರು ಇಂಡಸ್ಟ್ರಿಗೆ ದಾರಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ನನಗೆ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರು ಅವಕಾಶ ಕೊಟ್ಟರು ಎಂದು ಹೇಳಿದ್ದಾರೆ. ರಶ್ಮಿಕಾ ಅವರು ಈ ರೀತಿ ಹೇಳಿರುವುದು ಕನ್ನಡಿಗರಿಗೆ ಮೆಚ್ಚುಗೆಯಾಗಿದೆ. ತನಗೆ ಮೊದಲ ಸಿನಿಮಾ ಕೊಟ್ಟವರನ್ನೇ ಮರೆತಿದ್ದಾರೆ ಎಂದು ಎಲ್ಲರೂ ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದರು.

ರಶ್ಮಿಕಾ ಮಂದಣ್ಣ ಅಭಿನಯದ ಎರಡನೇ ತಮಿಳು ಸಿನಿಮಾ ವಾರಿಸು ಇತ್ತೀಚೆಗೆ ರಿಲೀಸ್ ಆಗಿದ್ದು ಸಕ್ಸಸ್​ ಆಗಿ ಓಡುತ್ತಿದೆ. ದಳಪತಿ ವಿಜಯ್ ಜೊತೆ ರಶ್ಮಿಕಾಗೆ ಇದು ಮೊದಲ ಸಿನಿಮಾ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!