ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾ ‘ಮೈಸಾ’ದಲ್ಲಿ ರಶ್ಮಿಕಾ ಮಂದಣ್ಣ ಅವರು ಮಿಂಚಲು ರೆಡಿ ಆಗಿದ್ದಾರೆ.
‘ಮೈಸಾ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಐದು ಭಾಷೆಯಲ್ಲಿ ನಿರ್ಮಾಣವಾಗಲಿದೆ . ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ಅನ್ಫಾರ್ಮುಲಾ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.
ನಿನ್ನೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇಂದು ಚಿತ್ರತಂಡ ಟೈಟಲ್ ರಿವೀಲ್ ಮಾಡಿದೆ. ಟೈಟಲ್ ಪೋಸ್ಟರ್ ನಲ್ಲಿ ರಶ್ಮಿಕಾ ಅವರ ಪಾತ್ರವನ್ನು ರಕ್ತಸಿಕ್ತವಾಗಿ ಅನಾವರಣ ಮಾಡಲಾಗಿದೆ.
‘ನಮ್ಮ ಚಿತ್ರ 2 ವರ್ಷದ ಪ್ರಯತ್ನವಾಗಿದೆ. ಚಿತ್ರದ ಪಾತ್ರಗಳು ಚೆನ್ನಾಗಿ ಮೂಡಿ ಬರಲು ಯತ್ನಿಸಲಾಗುತ್ತದೆ’ ಎಂದು ನಿರ್ದೇಶಕ ರವೀಂದ್ರ ಪುಲ್ಲೇ ಅವರು ಹೇಳಿದ್ದಾರೆ.
ಚಿತ್ರ ಆಕ್ಷನ್ ಥ್ರಿಲ್ಲರ್ ಆಗಿದ್ದು ಬಿಡುಗಡೆ ಆಗಿರುವ ಪೋಸ್ಟರ್ ಬಗ್ಗೆ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಕುತೂಹಲ ಮೂಡಿದೆ.
ರಶ್ಮಿಕಾ ಮಂದಣ್ಣ ಅವರು ಈಗಾಗಲೇ ‘ದಿ ಗರ್ಲ್ಫ್ರೆಂಡ್’ ಹೆಸರಿನ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ.
—-





Be the first to comment