ಹೊಸ ಚಿತ್ರ ಘೋಷಿಸಿದ ರಶ್ಮಿಕಾ

ರಶ್ಮಿಕಾ ಮಂದಣ್ಣ ಅವರು ಮತ್ತೊಂದು ಸಿನಿಮಾ ಘೋಷಿಸಲು ರೆಡಿ ಆಗಿದ್ದಾರೆ.  ಚಿತ್ರದ ಟೈಟಲ್ ಜೂನ್ 27ರಂದು ಅನೌನ್ಸ್ ಆಗಲಿದೆ.

ಈ ಚಿತ್ರದಲ್ಲಿ ರಶ್ಮಿಕಾ ಅವರದ್ದು ವಾರಿಯರ್ ಅವತಾರ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ರಶ್ಮಿಕಾ ಮಂದಣ್ಣ ಈವರೆಗೆ ಮಾಡಿದ  ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಅವರಿಗೆ ಮಹಿಳಾ ಪ್ರಧಾನ ಸಿನಿಮಾ ಸಿಕ್ಕಿದೆ ಎನ್ನಲಾಗಿದೆ.

ಸದ್ಯ   ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ. ಕಾಡಿನ ಮಧ್ಯೆ ರಶ್ಮಿಕಾ ನಿಂತಿದ್ದಾರೆ. ಅವರು ವಾರಿಯರ್ ರೀತಿ ಕಾಣಿಸಿದ್ದಾರೆ. ಅವರ ಕೈಯಲ್ಲಿ  ಆಯುಧವಿದೆ. ‘ಬೇಟೆ ಮಾಡಿ ಗಾಯಗೊಂಡರೂ ಬಗ್ಗಿಲ್ಲ’ ಎಂದು  ಪೋಸ್ಟರ್ ಮೇಲೆ ಬರೆಯಲಾಗಿದೆ. ಈ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಜೂನ್ 27ರ ಮುಂಜಾನೆ 10:8ಕ್ಕೆ ರಿಲೀಸ್ ಆಗಲಿದೆ.

ಚಿತ್ರವನ್ನು ಅನ್​ಫಾರ್ಮುಲಾ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿದೆ. ರಶ್ಮಿಕಾ ಮಂದಣ್ಣ ಅವರು ಈಗಾಗಲೇ ‘ದಿ ಗರ್ಲ್​ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಚಿತ್ರವನ್ನು ಮಾಡುತ್ತಿದ್ದಾರೆ.  ಈ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ನಟನೆಯ ‘ಕುಬೇರ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!