ವಿವಾಹದ ಫೋಟೋ ಹಂಚಿಕೊಂಡ ರಶ್ಮಿಕಾ

ರಶ್ಮಿಕಾ ಮಂದಣ್ಣ ವಿವಾಹದ ಸುಂದರ  ಫೋಟೊಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿವಾಹ  ನಿನ್ನೆ  ಉದಯಪುರದಲ್ಲಿ  ಅದ್ಧೂರಿಯಾಗಿ ನೆರವೇರಿತು. ಸ್ಟಾರ್ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆದ  ಮದುವೆಯ ನಂತರ ರಶ್ಮಿಕಾ ಮಂದಣ್ಣ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ವಿಜಯ್ ದೇವರಕೊಂಡ ಅವರನ್ನು ತಮ್ಮ ಪತಿ ಎಂದು ಪ್ರೀತಿಯಿಂದ ಪರಿಚಯಿಸಿದ್ದಾರೆ.  ಪ್ರೀತಿ, ಶಾಂತಿ ಮತ್ತು ಜೀವನದ ಬೆಂಬಲದ ಬಗ್ಗೆ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ, ರಶ್ಮಿಕಾ ಅವರೊಂದಿಗೆಗಿನ ಸ್ನೇಹ, ಪ್ರೀತಿ ಮತ್ತು ಆತ್ಮೀಯತೆಯನ್ನು ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಪೋಸ್ಟ್ ನಲ್ಲಿ ‘ ಹಾಯ್ ನನ್ನ ಪ್ರಿಯರೇ, ನಿಮಗೆ ಪರಿಚಯಿಸುತ್ತಿದ್ದೇನೆ — “ನನ್ನ ಪತಿಯನ್ನು ವಿಜಯ್ ದೇವರಕೊಂಡ! ನಿಜವಾದ ಪ್ರೀತಿ ಎಂದರೆ ಏನು ಎಂಬುದನ್ನು ನನಗೆ ತಿಳಿಸಿದ ವ್ಯಕ್ತಿ, ಮನಶ್ಶಾಂತಿ ಎಂದರೆ ಏನು ಎಂಬುದನ್ನು ತೋರಿಸಿದ ವ್ಯಕ್ತಿ!  ದೊಡ್ಡ ಕನಸು ಕಾಣುವುದು ಸಂಪೂರ್ಣವಾಗಿ ಸರಿ ಎಂದು ಪ್ರತಿದಿನ ಹೇಳಿದ ವ್ಯಕ್ತಿ. ನಾನು ಊಹಿಸಿದುದಕ್ಕಿಂತಲೂ ಹೆಚ್ಚಾಗಿ ಸಾಧಿಸಲು ನಾನು ಸಮರ್ಥಳೇ ಎಂದು ನಿರಂತರವಾಗಿ ನಂಬಿಕೆ ತುಂಬಿದ ವ್ಯಕ್ತಿ!

ಯಾರೂ ನೋಡುತ್ತಿಲ್ಲವೆಂಬಂತೆ ನಾನು ಕುಣಿಯುವುದನ್ನು ಎಂದಿಗೂ ತಡೆಯದ ವ್ಯಕ್ತಿ. ಸ್ನೇಹಿತರೊಂದಿಗೆ ಪ್ರವಾಸ ಮಾಡುವುದು ಜೀವನದ ಅತ್ಯುತ್ತಮ ಅನುಭವ ಎಂದು ತೋರಿಸಿದ ವ್ಯಕ್ತಿ.  ನಂಬಿ, ಈ ವ್ಯಕ್ತಿಯ ಬಗ್ಗೆ ನಾನು ಒಂದು ಪುಸ್ತಕವೇ ಬರೆಯಬಹುದು!

ನಾನು ಯಾವಾಗಲೂ ಕನಸು ಕಂಡ ಮಹಿಳೆಯಾಗಲು ಸಾಧ್ಯವಾದದ್ದು,  ಇಂದು ನಾನು ಆಗಿರುವುದಕ್ಕೆ ನೀನೇ ಕಾರಣ! ನಾನು ನಿಜವಾಗಿಯೂ ಧನ್ಯಳಾಗಿದ್ದೇನೆ! ವಿಜ್ಜು, ನಿನ್ನ ಬಗ್ಗೆ ನನಗಿರುವ ಭಾವನೆಗಳನ್ನು ವರ್ಣಿಸಲು ನನಗೆ ಪದಗಳು ಯಾವಾಗಲೂ ಸಾಲುತ್ತಿಲ್ಲ!! ಇದನ್ನು ನಾನು ಸದಾ ನಿನಗೆ ಹೇಳಿದ್ದೇನೆ!!

ನನ್ನ ಎಲ್ಲಾ ಸಾಧನೆಗಳು, ಹೋರಾಟಗಳು, ಸಂತೋಷ, ದುಃಖ, ಆನಂದ, ನನ್ನ ಜೀವನ ಈಗ ಹೆಚ್ಚು ಅರ್ಥಪೂರ್ಣವಾಗಿವೆ… ಏಕೆಂದರೆ ನನ್ನ ಜೊತೆ ನೀನಿದ್ದೀಯ. ಇವೆಲ್ಲವನ್ನೂ ಸಾಕ್ಷಿಯಾಗಿ ನೋಡುತ್ತಾ, ಅದರಲ್ಲಿ ಅತಿ ದೊಡ್ಡ ಭಾಗವಾಗಿರುವೆ!, ನಿನ್ನ ಪತ್ನಿಯಾಗಿರುವುದಕ್ಕೆ ನಾನು ತುಂಬಾ ಉತ್ಸುಕಳಾಗಿದ್ದೇನೆ! ನಾವು ಒಟ್ಟಿಗೆ ಅತ್ಯುತ್ತಮ ಜೀವನವನ್ನು ಕಟ್ಟೋಣ ಎಂದು ಬರೆದಿದ್ದಾರೆ.

ಇಬ್ಬರೂ ಪರಸ್ಪರವನ್ನು ಆತ್ಮೀಯ ಸ್ನೇಹಿತರು ಮತ್ತು ಜೀವನ ಸಂಗಾತಿಗಳಾಗಿ ಸ್ವೀಕರಿಸಿಕೊಂಡಿರುವುದಾಗಿ ಹೇಳಿ ಭರವಸೆ ತುಂಬಿದ ಸಂದೇಶ ನೀಡಿದ್ದಾರೆ. ಅಭಿಮಾನಿಗಳು ಇವರ  ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!