ಮದುವೆ ಬಗ್ಗೆ ಮೌನ ಮುರಿದ ರಶ್ಮಿಕಾ

ಇದೇ ಮೊದಲ ಬಾರಿಗೆನಟಿ ರಶ್ಮಿಕಾ ಮಂದಣ್ಣ ಅವರು ಮದುವೆ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ.

Honest Townhall ವಾನಿಯ ಸಂದರ್ಶನದಲ್ಲಿ ಫ್ಯಾನ್ಸ್‌ವೊಬ್ಬರು ಕೇಳಿದ ಪ್ರಶ್ನೆಗೆ  ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಅವರನ್ನ ಮದುವೆ ಆಗುವುದಾಗಿ ಹೇಳಿದ್ದಾರೆ.

ಮದುವೆ ಆಗೋದಾದ್ರೆ ಯಾರನ್ನ ಆಗ್ತೀರಾ ಎಂಬ ಫ್ಯಾನ್ ಪ್ರಶ್ನೆಗೆ ಹಿಂದೆ ಮುಂದೆ ಯೋಚನೆ ಮಾಡದೇ ವಿಜಯ್‌ನ ಮದುವೆ ಆಗುತ್ತೀನಿ ಎಂದಿದ್ದಾರೆ.  ‘ಆ ರೂಮರ್ಸ್‌ ಎಲ್ಲರಿಗೂ ಗೊತ್ತಿದೆ, ಅದು ಸತ್ಯ’ ಎಂದು ತಿಳಿಸಿದ್ದಾರೆ.

ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, ಬಾಳ ಸಂಗಾತಿ ಹೇಗಿರಬೇಕು ಎಂಬುದರ ಕುರಿತು ಹೇಳಿದ್ದಾರೆ. ‘ನನಗಾಗಿ ಯುದ್ಧವನ್ನೇ ಮಾಡಬಲ್ಲ, ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿಬಿದ್ದಾಗ ನನ್ನೊಂದಿಗೆ ನಿಲ್ಲಬಲ್ಲ ಜೀವನ ಸಂಗಾತಿ ಬೇಕು.  ಅತ್ಯಂತ ಆಳವಾಗಿ ನನ್ನನ್ನ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರಬೇಕು.  ಮುಕ್ತ ಮನಸ್ಸಿನ ಸಂಗಾತಿಯನ್ನ ಬಯಸುತ್ತೇನೆ. ನಾನೂ ಕೂಡ ಅವನಿಗಾಗಿ ಹೋರಾಡುತ್ತೇನೆ. ಯಾವುದೇ ದಿನ ಯಾವುದೇ ಕ್ಷಣ ಅವನಿಗಾಗಿ ಗುಂಡು ಹೊಡೆಸಿಕೊಳ್ಳಲು ಸಿದ್ಧಳಿದ್ದೇನೆಂದು ಹೇಳಿದ್ದಾರೆ.

ವಿಜಯ್ ದೇವರಕೊಂಡ ಹಾಗೂ  ರಶ್ಮಿಕಾ ಮಂದಣ್ಣ   2026ರ ಫೆಭ್ರವರಿಯಲ್ಲೇ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಉದಯಪುರದ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂಬ ವಿಚಾರ  ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.  ಈ ಬಗ್ಗೆ  ಮೊದಲ ಬಾರಿಗೆ ರಶ್ಮಿಕಾ ಅವರು ಮಾತನಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!