ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ವಿವಾಹ ನಡೆಯಲಿರುವ ಉದಯಪುರ ಸಿಟಿ ಪ್ಯಾಲೇಸ್ ಹೋಟೆಲ್ನ ಸಿದ್ಧತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ. ವಿವಾಹ ಅತ್ಯಂತ ಖಾಸಗಿಯಾಗಿ ಆಯ್ದ ಕೆಲವೇ ಮಂದಿಯ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.
ಉದಯಪುರದ ಸಿಟಿ ಪ್ಯಾಲೇಸ್ ಹೋಟೆಲ್ನಲ್ಲಿ ವಿವಾಹ ನಡೆಯುತ್ತಿದೆ ಎಂದು ವೈರಲ್ ಆಗಿರುವ ವಿಡಿಯೋದಲ್ಲಿರುವವರು ಹೇಳಿಕೊಂಡಿದ್ದಾರೆ. ಅವರ ಪ್ರಕಾರ ಫೆಬ್ರವರಿ 2ರಂದೇ ಮದುವೆ ನಡೆಯಲಿದೆ. ಈ ಹಿಂದೆ ಫೆಬ್ರವರಿ 26ರಂದು ಮದುವೆ ಎಂದು ಸುದ್ದಿಯಾಗಿತ್ತು.
ರಶ್ಮಿಕಾ ಮಂದಣ್ಣ ಅವರು ಇಂದೇ ಮದುವೆಯಾದರೆ, ವಿವಾಹದ ಫೋಟೋಗಳು ಇಂದೇ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುವ ಸಾಧ್ಯತೆ ಇದೆ. ಸೆಲಬ್ರಿಟಿಗಳು ನಿಜವಾದ ದಿನಾಂಕ ಗೋಪ್ಯವಾಗಿರಲಿ ಎಂಬ ಕಾರಣಕ್ಕೆ ತಪ್ಪು ದಿನಾಂಕಗಳನ್ನು ಹೊರಗೆ ಹರಿಯಲು ಬಿಡುತ್ತಾರೆ. ರಶ್ಮಿಕಾ ಮಂದಣ್ಣ ಕೂಡ ಇದೇ ತಂತ್ರ ಬಳಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಈ ಹಿಂದೆ ವಿಜಯ್ ದೇವರಕೊಂಡ ನಿವಾಸದಲ್ಲಿ ಗುಟ್ಟಾಗಿಯೇ ನಿಶ್ಚಿತಾರ್ಥ ನಡೆದಿತ್ತು ಎಂಬ ಸುದ್ದಿ ಹರಿದಾಡಿತ್ತು. ಮದುವೆಯನ್ನೂ ಸಾಕಷ್ಟು ರಹಸ್ಯವಾಗಿ ನಡೆಸಲಾಗುತ್ತಿದೆ.
—–





Be the first to comment