‘ಕ್ರಿಶ್ 4’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಪ್ರಿಯಾಂಕಾ ಚೋಪ್ರಾ ಸ್ಥಾನವನ್ನು ತುಂಬಲು ರೆಡಿ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
‘ಕ್ರಿಶ್ 4’ ಚಿತ್ರದ ಸ್ಕ್ರಿಪ್ಟ್ ಕೆಲಸ ಪ್ರಗತಿಯಲ್ಲಿ ಇದೆ. ಜೊತೆಗೆ ಪಾತ್ರವರ್ಗದ ಆಯ್ಕೆ ಫೈನಲ್ ಮಾಡುವ ಕೆಲಸ ಆಗುತ್ತಿದೆ. ‘ಕ್ರಿಶ್’ ಹಾಗೂ ‘ಕ್ರಿಶ್ 3’ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಆಗಿದ್ದರು. ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಈಗ ನಿರ್ಮಾಪಕರ ಕಣ್ಣು ರಶ್ಮಿಕಾ ಮಂದಣ್ಣ ಮೇಲೆ ಬಿದ್ದಿದೆ.
ಹೃತಿಕ್ ರೋಷನ್ ಅವರು ‘ಕ್ರಿಶ್ 4’ ಚಿತ್ರದ ಹೀರೋ. ಹೃತಿಕ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿಲ್ಲ. ಈ ಫ್ರೆಶ್ ಜೋಡಿಗೆ ಚಿತ್ರತಂಡದವರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ವರದಿ ಆಗಿದೆ.
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ, ‘ಪುಷ್ಪ 2’, ‘ಅನಿಮಲ್’, ‘ಛಾವಾ’ ಸಿನಿಮಾಗಳನ್ನು ನೀಡಿ ಯಶಸ್ಸು ಕಂಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಫ್ಲಾಪ್ ಎನಿಸಿಕೊಂಡರೂ ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ರಶ್ಮಿಕಾ ಅವರು ಸದ್ಯ ‘ಥಮ’ ಹೆಸರಿನ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ‘ಕಾಕ್ಟೇಲ್ 2′, ‘ ಗರ್ಲ್ ಫ್ರೆಂಡ್ ‘ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
—–





Be the first to comment