ರಶ್ಮಿಕಾ

ಗುಟ್ಟಾಗಿ ರಶ್ಮಿಕಾ ನಿಶ್ಚಿತಾರ್ಥ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಖಾಸಗಿ ಸಮಾರಂಭದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಶುಕ್ರವಾರ ಸಂಜೆ ವಿಜಯ್ ದೇವರಕೊಂಡ ನಿವಾಸದಲ್ಲಿ ನಡೆದ  ಸಮಾರಂಭದಲ್ಲಿ ನಿಕಟ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಈ ಜೋಡಿ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ. ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ತಮ್ಮ ನಿಶ್ಚಿತಾರ್ಥ ಬಗ್ಗೆ ಜೋಡಿ ಇದುವರೆಗೆ ಹೇಳಿಕೊಂಡಿಲ್ಲ. ಅವರ ಕುಟುಂಬ ವರ್ಗ ಕೂಡ ಅಧಿಕೃತವಾಗಿ ಘೋಷಿಸಿಲ್ಲ. ಸಾಕಷ್ಟು ಗೌಪ್ಯವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು ಎಂದು ಹೇಳಲಾಗುತ್ತಿದೆ.

ರಶ್ಮಿಕಾ ಮತ್ತು ವಿಜಯ್ ಸಂಬಂಧದ ಬಗ್ಗೆ ಇಂಡಸ್ಟ್ರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಅವರು ಒಟ್ಟಿಗೆ ರಜಾದಿನಗಳನ್ನು ಕಳೆಯುತ್ತಿದ್ದು  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು.

ರಶ್ಮಿಕಾ ದಸರಾ ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪನ್ನು  ಧರಿಸಿರುವ ಚಿತ್ರವನ್ನು ಹಂಚಿಕೊಂಡು , ‘ಥಮ’ ಚಿತ್ರದ   ಬಗ್ಗೆ ಬರೆದು ಎಲ್ಲರ ಪ್ರೀತಿ, ಆಶೀರ್ವಾದ ಸಿಗಲಿ ಎಂದು ಕೇಳಿಕೊಂಡಿದ್ದರು.

ನಿರ್ದೇಶಕ ಆದಿತ್ಯ ಸರ್ಪೋತ್ದಾರ್ ಅವರ ಹಾರರ್-ಹಾಸ್ಯಮಯ ‘ಥಮ’ದಲ್ಲಿ ಆಯುಷ್ಮಾನ್ ಖುರಾನಾ ಜೊತೆ ರಶ್ಮಿಕಾ ಮಂದಣ್ಣ, ಕಾಣಿಸಿಕೊಳ್ಳಲಿದ್ದಾರೆ.   ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಅಕ್ಟೋಬರ್ 21 ದೀಪಾವಳಿಗೆ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!