ರಶ್ಮಿಕಾ ಮಂದಣ್ಣ

ರಿಲೇಷನ್ ಶಿಪ್ ಬಗ್ಗೆ ಬಾಯಿ ಬಿಟ್ಟ ರಶ್ಮಿಕಾ

ಛಾವಾ ಸಿನಿಮಾದ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ತಾವು ರಿಲೇಷನ್‌ಶಿಪ್‌ನಲ್ಲಿ ಇರುವ ಸುಳಿವು ನೀಡಿದ್ದಾರೆ.

ರಶ್ಮಿಕಾ  ಸದ್ಯ ‘ಛಾವಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕಾಲಿಗೆ ಏಟಾಗಿದ್ದರೂ ಯಾವುದನ್ನೂ ಲೆಕ್ಕಿಸದೆ ರಶ್ಮಿಕಾ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಛಾವಾ ಸಿನಿಮಾದ ಸಂದರ್ಶನವೊಂದರಲ್ಲಿ  ರಶ್ಮಿಕಾ , ‘ನನಗೆ ನನ್ನ ಮನೆಯೇ ಖುಷಿಯ ಸ್ಥಳ. ಯಶಸ್ಸು ಇಂದು ಬಂದು ಮುಂದೊಂದು ದಿನ ಹೋಗಬಹುದು. ಅದು ಎಂದಿಗೂ ಶಾಶ್ವತವಲ್ಲ. ಎಷ್ಟೇ ಸಿಕ್ಕರೂ ಕೂಡ ನಾನು ನಟಿ ಮಾತ್ರವಲ್ಲದೇ ಮಗಳು, ಸಹೋದರಿ, ಓರ್ವ ಪಾರ್ಟ್ನರ್ ಕೂಡ ಹೌದು’ ಎಂದು ಹೇಳಿದ್ದಾರೆ.

ರಶ್ಮಿಕಾ ಎಲ್ಲೂ ಕೂಡ ಸಂಗಾತಿ ಹೆಸರನ್ನು ರಿವೀಲ್‌ ಮಾಡಿಲ್ಲ. ಪಾರ್ಟ್ನರ್ ಎಂದು ಪದ ಬಳಸಿದ ರಶ್ಮಿಕಾ, ತಾವು ರಿಲೇಷನ್‌ಶಿಪ್‌ನಲ್ಲಿರೋದಾಗಿ ಹೇಳಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ರಶ್ಮಿಕಾ ಹೆಸರು ವಿಜಯ್ ದೇವರಕೊಂಡ ಜೊತೆ ಕೇಳಿ ಬರುತ್ತಿರುತ್ತಿದೆ. ಹಲವು ಭಾರಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರೂ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!