ಐತಿಹಾಸಿಕ ಸಿನಿಮಾ ‘‘ಛಾವಾ’’ದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ರಶ್ಮಿಕಾ ಪಾತ್ರದ ಲುಕ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಚಿತ್ರತಂಡ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಎರಡು ಪೋಸ್ಟರ್‌ಗಳನ್ನು ಶೇರ್ ಮಾಡಲಾಗಿದ್ದು, ಇದರಲ್ಲಿ ರಶ್ಮಿಕಾ ‘ಯೇಸುಬಾಯಿ ಭೋಸಲೆ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಚಿತ್ರವನ್ನು ಲಕ್ಷ್ಮಣ್ ಉತ್ತೇಕರ್ ನಿರ್ದೇಶನ ಮಾಡಿದ್ದು ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ‘ಛಾವಾ’ ಸಿನಿಮಾದಲ್ಲಿ ವಿಕ್ಕಿಗೆ ಜೋಡಿಯಾಗಿ ರಶ್ಮಿಕಾ ಮಿಂಚಿದ್ದಾರೆ.
ಪೋಸ್ಟರ್ ಹಂಚಿಕೊಂಡ ಚಿತ್ರತಂಡ , “ಪ್ರತೀ ಮಹಾನ್ ರಾಜನ ಹಿಂದೆ, ಅಪ್ರತಿಮ ಶಕ್ತಿಯುಳ್ಳ ರಾಣಿ ನಿಂತಿರುತ್ತಾಳೆ. ರಶ್ಮಿಕಾ ಮಂದಣ್ಣ ಅವರನ್ನು ಸ್ವರಾಜ್ಯದ ಹೆಮ್ಮೆ, ಮಹಾರಾಣಿ ಯೇಸುಬಾಯಿಯಾಗಿ ಪರಿಚಯಿಸಲಾಗುತ್ತಿದೆ” ಎಂದು ಬರೆದುಕೊಂಡಿದೆ.
ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಈಗಾಗಲೇ ಕೆಲವೊಂದು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಮತ್ತೊಂದು ಬಿಗ್ ಬಜೆಟ್ ಚಿತ್ರ ‘‘ಛಾವಾ’’ ಒಪ್ಪಿಕೊಂಡಿದ್ದಾರೆ.
—–
Be the first to comment