ರಶ್ಮಿಕಾ ಮಂದಣ್ಣ ಅವರು ಕಾಂತಾರ ಚಿತ್ರವನ್ನು ವೀಕ್ಷಿಸಿಲ್ಲ ಎಂದು ಹೇಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ 2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದ ರಶ್ಮಿಕಾ ಇದೀಗ ಮೊದಲ ನಿರ್ದೇಶಕರ ಚಿತ್ರ ನೋಡಿಲ್ಲ ಎಂದಿರುವುದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.
ಸಿನಿಮಾ ನೋಡಿಲ್ಲ ಎಂದು ಉಡಾಫೆಯಾಗಿ ಹೇಳಿದ ರೀತಿಗೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾ ಮೂಲಕನೇ ಇಂದು ಬಾಲಿವುಡ್ ನಲ್ಲಿ ಮಿಂಚುತ್ತಿದ್ದೀರಾ, ಆದರೆ ಅವರನ್ನೇ ಮರೆತಿದ್ದೀರಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ತಮ್ಮ ಮೊದಲ ಸಿನಿಮಾ ನಿರ್ದೇಶಕನ ಚಿತ್ರ ಹೇಗಿದೆ ಎಂದು ಹೇಳುವ ನಿಯತ್ತು ಕೂಡ ಇಲ್ಲ ಎಂದು ನೆಟ್ಟಿಗರು ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚಿಗಷ್ಟೆ ಮುಂಬೈನಲ್ಲಿ ಕಾಣಿಸಿಕೊಂಡ ರಾಶ್ಮಿಕಾಗೆ ಪಾಪರಾಜಿಗಳು ಕಾಂತಾರ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ರಶ್ಮಿಕಾ ಇನ್ನು ನೋಡಿಲ್ಲ, ನೋಡುತ್ತೇನೆ ಎಂದು ಉತ್ತರಿಸಿದರು. ರಶ್ಮಿಕಾ ಉತ್ತರ ನೆಟ್ಟಿಗರನ್ನು ಕೆರಳಿಸಿದೆ.
ಕಾಂತಾರ ಸಿನಿಮಾ ನೋಡಿ ಪರಭಾಷೆಯ ಸೂಪರ್ ಸ್ಟಾರ್ಗಳೇ ಹಾಡಿ ಹೊಗಳುತ್ತಿರುವಾಗ ಕನ್ನಡದವರೇ ಆಗಿರುವ ರಶ್ಮಿಕಾ ಇನ್ನೂ ಸಿನಿಮಾ ನೋಡದೇ ಇರುವುದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.
ರಶ್ಮಿಕಾ ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ರಶ್ಮಿಕಾ ನಟನೆಯ ಮೊದಲ ಸಿನಿಮಾ ಗುಡ್ ಬೈ ರಿಲೀಸ್ ಆಗಿದ್ದು, ಸಕ್ಸಸ್ ಕಂಡಿಲ್ಲ.
___
Be the first to comment