ಮೆಕ್ ಡೊನಾಲ್ಡ್ ಗಾಡಿ ಹತ್ತಿ ‘ದ ರಶ್ಮಿಕಾ ಮೀಲ್’ ನ್ನು ಆರ್ಡರ್ ಮಾಡಿದವರಿಗೆ ಸ್ವತಃ ರಶ್ಮಿಕಾ ಮಂದಣ್ಣ ಅವರೇ ಫುಡ್ ಡೆಲಿವರಿ ಮಾಡಿ ಗಮನ ಸೆಳೆದಿದ್ದಾರೆ.
ಮೆಕ್ ಡೋನಾಲ್ಡ್ ಪ್ರಚಾರದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಅವರು ತಮ್ಮ ಮುಖವನ್ನು ಮಾಸ್ಕ್‌ನಲ್ಲಿ ಮುಚ್ಚಿ ಫುಡ್ ಡೆಲಿವರಿ ಮಾಡಿದ್ದಾರೆ. ರಶ್ಮಿಕಾ ಅವರ ಗುರುತು ಹಿಡಿದಿರುವ ಗ್ರಾಹಕರು ರಶ್ಮಿಕಾ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಒಟ್ಟಾರೆ ಫುಡ್ ಡೆಲಿವರಿ ಗರ್ಲ್ ಆಗಿ ರಶ್ಮಿಕಾ ಗ್ರಾಹಕರಿಗೆ ಖುಷಿ ನೀಡಿದ್ದಾರೆ.
ಮೆಕ್ ಡೊನಾಲ್ಡ್‌ನ ಪ್ರಚಾರದ ಒಂದು ಭಾಗವಾಗಿ ಈ ಪ್ರಯೋಗ ಮಾಡಲಾಗಿದೆ. ಮೆಕ್ ಡೊನಾಲ್ಡ್‌ನಲ್ಲಿ ದ ರಶ್ಮಿಕಾ ಮೀಲ್ ಹೆಸರಿನ ಊಟ ದೊರಕುತ್ತಿದ್ದು, ಅದನ್ನು ಹೇಗೆ ತಿನ್ನೋದು ಎಂದು ಈ ಹಿಂದೆ ರಶ್ಮಿಕಾ ಜಾಹೀರಾತು ಮೂಲಕ ತಿಳಿಸಿದ್ದರು. ಈಗ ರಶ್ಮಿಕಾ ಅವರು ಮೆಕ್ ಡೊನಾಲ್ಡ್ ಗಾಡಿ ಹತ್ತಿ, ಮುಖವನ್ನು ಮಾಸ್ಕ್‌ನಲ್ಲಿ ಮುಚ್ಚಿ ‘ದ ರಶ್ಮಿಕಾ ಮೀಲ್ ‘ಆರ್ಡರ್ ಮಾಡಿದ್ದವರಿಗೆ ಸ್ವತಃ ಫುಡ್ ಡೆಲಿವರಿ ಮಾಡಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಫುಡ್ ಕಂಪೆನಿ ಮೆಕ್ ಡೋನಾಲ್ಡ್ ಗೆ ರಶ್ಮಿಕಾ ಅಂಬಾಸಿಡರ್ ಆಗಿದ್ದಾರೆ ಅಮೇರಿಕಾ ಮೂಲದ ಈ ಕಂಪೆನಿ ರಶ್ಮಿಕಾ ಅವರನ್ನು ಬಳಸಿಕೊಂಡು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದೆ. ಫುಡ್ ಡಿಲೆವರಿ ಗರ್ಲ್ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ ಅವರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಮೆಕ್ ಡೋನಾಲ್ಡ್ ಶೇರ್ ಮಾಡಿದೆ.
“ನನ್ನ ಹೆಸರಿನ ಮೀಲ್ ನ್ನು ಹೀಗೆ ಗುಟ್ಟಾಗಿ ತೆಗೆದುಕೊಂಡು ಹೋಗಿರುವುದಕ್ಕೆ ನನಗೆ ಖುಷಿಯಾಗಿದೆ. ಇದು ಫನ್ ಆಗಿತ್ತು. ಗ್ರಾಹಕರಿಂದ ಈ ರೀತಿಯ ಪ್ರತಿಕ್ರಿಯೆ ನಾನು ಎದುರು ನೋಡಿರಲಿಲ್ಲ” ಎಂದು ರಶ್ಮಿಕಾ ಹೇಳಿದ್ದಾರೆ.
ಪುಷ್ಪ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
_
Be the first to comment