ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ನಿವೃತ್ತಿ ಬಗ್ಗೆ ಮಾತನಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ದಕ್ಷಿಣದಿಂದ ಬಂದು ಛಾವಾ ಸಿನಿಮಾದ ಮಹಾರಾಣಿ ಯೇಸುಬಾಯಿ ಪಾತ್ರವನ್ನು ಮಾಡಿದ್ದೇನೆ. ಇದು ನನ್ನ ಜೀವಿತಾವಧಿಯಲ್ಲಿ ಮಾಡಿದ ವಿಶೇಷ ಕೆಲಸ. ಈ ಸಿನಿಮಾ ಬಳಿಕ ನಿವೃತ್ತಿ ಹೊಂದಲು ನನಗೆ ಖುಷಿ ಇದೆ ಎಂದು ನಿರ್ದೇಶಕ ಲಕ್ಷ್ಮಣ್ ಅವರಿಗೆ ರಶ್ಮಿಕಾ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾದ ಪ್ರಮೋಷನ್ ನಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಈ ಚಿತ್ರದಲ್ಲಿ ಮರಾಠ ದೊರೆ ಛತ್ರಪತಿ ಶಿವಾಜಿ ಪುತ್ರ ಸಾಂಭಾಜಿ ಪಾತ್ರದಲ್ಲಿ ವಿಕ್ಕಿ ನಟಿಸಿದ್ದಾರೆ. ರಶ್ಮಿಕಾ ಅವರು ಸಾಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ನಾನು ಅಳುತ್ತಾ ಕೂರುವ ವ್ಯಕ್ತಿ ಅಲ್ಲ. ಆದರೆ, ಈ ಟ್ರೇಲರ್ನ ನನ್ನನ್ನು ಪ್ರಚೋದಿಸಿತು. ವಿಕ್ಕಿ ಕೌಶಲ್ ದೇವರ ರೀತಿ ಕಾಣುತ್ತಿದ್ದಾರೆ. ಅವರು ಛಾವಾ’ ಎಂದು ರಶ್ಮಿಕಾ ಮಂದಣ್ಣ ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ರಶ್ಮಿಕಾ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಡೆದಾಡಲು ಕಷ್ಟಪಡುತ್ತಿರುವ ರಶ್ಮಿಕಾ ಮಂದಣ್ಣ ಛಾವಾ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಅವರಿಗೆ 28 ವರ್ಷ ವಯಸ್ಸು. ಅವರು ಇಷ್ಟು ಬೇಗ ನಿವೃತ್ತಿ ಪಡೆಯೋದು ಅನುಮಾನ ಆಗಿದೆ.
Be the first to comment