‘ರತ್ನಮಂಜರಿ’ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ ಧ್ವನಿಸುರುಳಿ ಬಿಡುಗಡೆ

ಅಮೇರಿಕಾದಲ್ಲಿ ನಡೆಯುವ ಅಧ್ದುರಿ ಕಾರ್ಯಕ್ರಮವಾದ ಅಕ್ಕ ಸಮ್ಮೇಳನದಲ್ಲಿ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತಿದೆ.

ದಿವಂಗತ ನರಸಿಂಹರಾಜು ಅವರ ನಟನೆಯಲ್ಲಿ ಈ ಹಿಂದೆ ‘ರತ್ನಮಂಜರಿ’ ಎನ್ನುವ ಸಿನಿಮಾ ಬಂದಿತ್ತು. ಇದೀಗ ಅದೇ ಹೆಸರಿನಲ್ಲೊಂದು ಚಿತ್ರ ಬರುತ್ತಿದೆ. ನಟರಾಜ ಹಳೇಬೀಡು ಎಂಬುವವರು ಹದಿನೆಂಟು ವರ್ಷದ ಕೆಳಗೆ ಅಮೇರಿಕಾಕ್ಕೆ ಹೊಟ್ಟೆಪಾಡಿಗೆ ಹೋಗಿದ್ದರು, ಈಗ ಅವರು ‘ಕುವೆಂಪು ಹೇಳಿದಂತೆ ಎಲ್ಲಾ ಕಡೆ ಕನ್ನಡವನ್ನು ಪಸರಿಸಬೇಕೆಂಬ ಧ್ಯೇಯ’ದಿಂದ ಕನ್ನಡ ಸಂಘಗಳನ್ನು ಕಟ್ಟಲಾಗುತ್ತಿದೆ. ನಿರ್ಮಾಣ ಮಾಡುವ ಉದ್ದೇಶದಿಂದ ಮರ್ಡರ್ ಮಿಸ್ಟರಿಯೊಂದಿಗೆ ‘ರತ್ನಮಂಜರಿ’ಚಿತ್ರವನ್ನುಮಾಡುತ್ತಿದ್ದಾರೆ.

ನೃತ್ಯ ನಿರ್ದೇಶಕರಾಗಿ ಗುರುತಿಕೊಂಡಿರುವ ಪ್ರಸಿದ್, ಕನ್ನಡಿಗರಾಗಿ ಕನ್ನಡದಲ್ಲಿ ಶೀರ್ಷಿಕೆ ಇಡಬೇಕೆಂದು ಈ ಚಿತ್ರಕ್ಕೆ ರತ್ನಮಂಜಜರಿ ಎಂಬ ಟೈಟಲ್ ಇಡಲಾಗಿದೆ ಎನ್ನುತ್ತಾರೆ. ಇನ್ನು ಶರಾವತಿ ಫಿಲಂಸ್ ಬ್ಯಾನರ್ ಅಡಿ ಎನ್.ಆರ್.ಐಗಳೇ ಕೂಡಿಕೊಂಡು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಯುಎಸ್ ಹಾಗೂ ಕೂರ್ಗ್ ನಲ್ಲಿ ಚಿತ್ರೀರಿಸುವ ಈ ಚಿತ್ರದಲ್ಲಿ ರಾಜಚರಣ್ ಹಾಗೂ ಅಖಿಲಾಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಸಿನಿಮಾದ ವಿರಾಮದವರೆಗೂ ಚಿತ್ರ ಅಮೆರಿಕಾದಲ್ಲಿ ಸಾಗುವುದರಿಂದ ಅಲ್ಲಿ ನೆಲೆಸಿರುವ ಕನ್ನಡದ ಕಲಾವಿದರನ್ನೇ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮತ್ತು ಅವರ ಪಾತ್ರ ಅಲ್ಲಿಗೇ ಮುಗಿಯುತ್ತದೆ. ಆ ನಂತರ ಕಥೆ ಮಡಿಕೇರಿಯಲ್ಲಿ ನಡೆಯುತ್ತದೆ.ಕನ್ನಡದ ಮೇಲಿನ ಪ್ರೇಮದಿಂದಲೇ ರತ್ನಮಂಜರಿ ಎಂಬ ಚಿತ್ರವನ್ನು ನಿರ್ಮಿಸಿರುವ ಎನ್.ಆರ್.ಐ ಗಳ ಈ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಹರಸುವಂತಾಗಲ

 

Be the first to comment

Leave a Reply

Your email address will not be published. Required fields are marked *

Translate »
error: Content is protected !!