ರಾನಿ

ಆಗಸ್ಟ್ 20ಕ್ಕೆ ‘ರಾನಿ’ ಟ್ರೈಲರ್ ರಿಲೀಸ್

ಕಿರಣ್ ರಾಜ್ ನಟನೆಯ ಬಹು ನಿರೀಕ್ಷಿತ ‘ರಾನಿ’ ಚಿತ್ರದ ಟ್ರೈಲರ್ ಆಗಸ್ಟ್ 20ಕ್ಕೆ ಟಿ ಸಿರೀಸ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.

ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಸ್ಟಾರ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ಕಿರಣ್ ರಾಜ್ ಸೇರಿದಂತೆ ರವಿಶಂಕರ್, ಬಿ ಸುರೇಶ್, ಉಗ್ರಂ ಮಂಜು, ಉಗ್ರಂ ರವಿ, ಯಶ್ ಶೆಟ್ಟಿ, ಧರ್ಮಣ್ಣ, ಸೂರ್ಯ ಕುಂದಾಪುರ, ಕರಿ ಸುಬ್ಬು, ಮೈಕೋ ನಾಗರಾಜ, ಪೃಥ್ವಿ, ಅರ್ಜುನ್ ಪಾಳೇಗಾರ್, ಸಮೀಕ್ಷಾ, ಅಪೂರ್ವ, ರಾಧ್ಯಾ ಇತರರು ತಾರಾಬಳಗದಲ್ಲಿದ್ದಾರೆ.

ಚಿತ್ರಕ್ಕೆ ಉಮೇಶ್ ಆರ್ ಬಿ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ನೀಡಿದ್ದಾರೆ.

ಚಿತ್ರ ಆಗಸ್ಟ್ 30ಕ್ಕೆ ತೆರೆ ಮೇಲೆ ಬರಲು ಚಿತ್ರತಂಡ ಎಲ್ಲಾ ರೀತಿಯಿಂದ ಸಜ್ಜಾಗಿದೆ.

ರಾನಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!