ತೆಲುಗು ಸ್ಟಾರ್ ಮಹೇಶ್ ಬಾಬು ನಟನೆಯ ಮುಂದಿನ ಚಿತ್ರಕ್ಕೆ ಬಾಲಿವುಡ್ ನಟಿ ರಾಣಿ ಮುಖರ್ಜಿ ಅಮ್ಮನಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ನಾಯಕಿಯಾಗಿ ಬಾಲಿವುಡ್ ನಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ್ದ ರಾಣಿ ಮುಖರ್ಜಿ ತೆಲುಗು ಚಿತ್ರೋದ್ಯಮಕ್ಕೆ ಅಮ್ಮನಾಗಿ ಎಂಟ್ರಿ ಕೊಡಲಿದ್ದಾರೆ.
ಈಗಾಗಲೇ ನಿರ್ದೇಶಕರು ಪಾತ್ರದ ಬಗ್ಗೆ ಮಾಹಿತಿಯನ್ನೂ ನೀಡಿದ್ದು, ಚಿತ್ರದಲ್ಲಿ ನಟಿಸಲು ರಾಣಿ ಮುಖರ್ಜಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ.
ತ್ರಿವಿಕ್ರಂ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಕನ್ನಡದ ನಟಿ ಶ್ರೀಲೀಲಾ ಮತ್ತು ಪೂಜಾ ಹೆಗ್ಡೆ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ರಾಣಿ ಮುಖರ್ಜಿ ಎಂಟ್ರಿ ಕೊಡುತ್ತಿದ್ದಂತೆಯೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಈಗಾಗಲೇ ಈ ಸಿನಿಮಾದ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಜನವರಿ ಎರಡನೇ ವಾರದಿಂದ ಮುಂದಿನ ಭಾಗದ ಶೂಟಿಂಗ್ ಶುರು ಮಾಡಲಿದ್ದು, ಈ ವೇಳೆ ರಾಣಿ ಮುಖರ್ಜಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಪಾತ್ರಕ್ಕೆ ತನ್ನದೇ ಆದ ಗತ್ತಿನ ಹಿನ್ನೆಲೆ ಇರುವುದರಿಂದ ರಾಣಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು ಎಂದು ಹೇಳಲಾಗಿದೆ.
__
Be the first to comment