ಜುಲೈ 4ರಂದು ‘ರಂಗಿತರಂಗ’ ರೀ-ರಿಲೀಸ್

ಅನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ ಚಿತ್ರ ಜುಲೈ 4ರಂದು ಮತ್ತೆ ದೊಡ್ಡ ಪರದೆ ಮೇಲೆ ಬರಲಿದೆ.

‘ರಂಗಿತರಂಗ’ ಸಿನಿಮಾಗೆ ಈಗ ರಿಲೀಸ್ ಆಗಿ ದಶಕದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಅನೂಪ್ ಭಂಡಾರಿ ಅವರು ಈ ಚಿತ್ರವನ್ನು ಮತ್ತೆ  ರೀ-ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

‘ರಂಗಿತರಂಗ’  ಚಿತ್ರ ರಿಲೀಸ್ ಆಗಿದ್ದು 2015ರ ಜುಲೈ 3ರಂದು.  ಅನೂಪ್ ಭಂಡಾರಿ ಅವರು ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದರು. ರಿಲೀಸ್ ಆಗಿ 10 ವರ್ಷ ತುಂಬಿದ ವಿಶೇಷ ಸಂದರ್ಭದಲ್ಲಿ ಅನೂಪ್ ಭಂಡಾರಿ ಈ ಚಿತ್ರವನ್ನು ಮತ್ತೆ ರೀ-ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

‘10 ವರ್ಷ ತುಂಬಿದ ಖುಷಿಯಲ್ಲಿ ರಂಗಿತರಂಗ ಸಿನಿಮಾ ಜುಲೈ 4ರಂದು ಮತ್ತೆ ರಿಲೀಸ್ ಆಗುತ್ತಿದೆ.  ಯಾರು ಈ ಚಿತ್ರವನ್ನು ಇನ್ನೂ ವೀಕ್ಷಿಸಿಲ್ಲವೋ ಅಥವಾ ಮತ್ತೊಮ್ಮೆ ಈ ಚಿತ್ರವನ್ನು ನೋಡಬೇಕು ಎಂದು ಯಾರು ಬಯಸಿದ್ದೀರೋ ಅವರು ವೀಕ್ಷಿಸಬಹುದು. ನಮ್ಮ ಚಿತ್ರಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು. ಥಿಯೇಟರ್​ನಲ್ಲಿ ಸಿಗೋಣ’ ಎಂದು ಅನೂಪ್ ಭಂಡಾರಿ ಬರೆದುಕೊಂಡಿದ್ದಾರೆ.

‘ರಂಗಿತರಂಗ’ ಸಿನಿಮಾದ ಕಥೆ ಕರಾವಳಿಯಲ್ಲಿ ಸಾಗುತ್ತದೆ. ಅಲ್ಲಿನ ದೈವದ ವಿಚಾರವನ್ನು ಇದರಲ್ಲಿ ಹೇಳಲಾಗಿದೆ.  ಸಿನಿಮಾದಲ್ಲಿ ನಿರೂಫ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಸಾಯಿಕುಮಾರ್ ನಟಿಸಿದ್ದಾರೆ. ಈ ಚಿತ್ರ ‘ಗುಡ್ಡದ ಭೂತ’ ಧಾರಾವಾಹಿಯನ್ನಾಧರಿಸಿದೆ.

ಅನೂಪ್ ಭಂಡಾರಿ ಸಂಗೀತ ಸಂಯೋಜನೆ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. 1.5 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಚಿತ್ರ 43 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!