Rangasamudra Review : ಶಿಕ್ಷಣದ ಮಹತ್ವ ಸಾರುವ ರಂಗಸಮುದ್ರ

ಚಿತ್ರ: ರಂಗಸಮುದ್ರ

ನಿರ್ದೇಶನ: ರಾಜಕುಮಾರ್ ಅಸ್ಕಿ
ನಿರ್ಮಾಣ: ಹೊಯ್ಸಳ
ತಾರಾಬಳಗ: ರಂಗಾಯಣ ರಘು, ರಾಘವೇಂದ್ರ ರಾಜಕುಮಾರ್, ಮಹೇಂದ್ರ, ಸ್ಕಂದ, ಸಂಪತ್ ಕುಮಾರ್ ಇತರರು.
ರೇಟಿಂಗ್: 3.5/5

ಸಮಾಜದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೇ ಮದ್ದು ಎನ್ನುವ ಸಂದೇಶ ನೀಡುವ ಚಿತ್ರವಾಗಿ ರಂಗಸಮುದ್ರ ತೆರೆಯ ಮೇಲೆ ಬಂದಿದೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು ಚನ್ನಪ್ಪಜ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡೊಳ್ಳು ಕುಣಿತದ ಅಪ್ರತಿಮ ಕಲಾವಿದರಾದ ಚನ್ನಪ್ಪಜ್ಜನ ಸರ್ವಸ್ವ ಮೊಮ್ಮಗ ಗೂಬೆ. ಉತ್ತಮ ಶಿಕ್ಷಣ ಪಡೆದು ಮೊಮ್ಮಗ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕು ಎನ್ನುವುದು ಚನ್ನಪ್ಪಜ್ಜನ ಆಸೆ.

ಆ ಊರಿನ ದರ್ಪಿಷ್ಟ ಯಜಮಾನ ಕಾರಿನಲ್ಲಿ ಓಡಾಡುತ್ತಾ ಹಣಕ್ಕಾಗಿ ಜನರ ಪ್ರಾಣ ಹಿಂಡುತ್ತಾನೆ. ಅಜ್ಜನನ್ನು ಯಜಮಾನನ ರೀತಿ ಕಾರಿನಲ್ಲಿ ಕೂರಿಸಿಕೊಂಡು ಓಡಾಡಬೇಕು ಎನ್ನುವುದು ಮೊಮ್ಮಗನ ಆಸೆ. ಈ ಆಸೆ ಈಡೇರುತ್ತದೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಚಿತ್ರದಲ್ಲಿ ಶಿಕ್ಷಣದ ಮಹತ್ವವನ್ನು ಹೇಳುವ ಜೊತೆಗೆ ತಾತ ಹಾಗೂ ಮೊಮ್ಮಗನ ಬಾಂಧವ್ಯವನ್ನು ಬೆಸೆಯಲಾಗಿದೆ. ಚಿತ್ರದಲ್ಲಿ ಉತ್ತರ ಕರ್ನಾಟಕದ ಸಂಭಾಷಣೆಯನ್ನು ಬಳಸಿಕೊಳ್ಳಲಾಗಿದೆ. ಸುಮಧುರವಾದ ಸಂಗೀತ, ಹಿತವಾದ ಛಾಯಾಗ್ರಹಣದ ಮೂಲಕ ಚಿತ್ರದ ಅಂದವನ್ನು ಹೆಚ್ಚಿಸುವ ಯತ್ನ ಮಾಡಲಾಗಿದೆ.

ರಂಗಾಯಣ ರಘು ಅಜ್ಜನ ಪಾತ್ರದಲ್ಲಿ ಮಿಂಚಿದ್ದಾರೆ. ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ತಿರುವು ನೀಡುವ ಪಾತ್ರ ನಿರ್ವಹಿಸಿದ್ದಾರೆ. ನಮ್ಮನೆಗನಾಗಿ ನಟಿಸಿರುವ ಸ್ಕಂದ ಉತ್ತಮ ಅಭಿನಯವನ್ನು ತೋರಿಸಿದ್ದಾರೆ. ಮಾಸ್ಟರ್ ಮಹೇಂದ್ರ ಅವರ ಪಾತ್ರವು ಚೆನ್ನಾಗಿ ನೋಡಿ ಬಂದಿದೆ.

ಒಂದು ಒಳ್ಳೆಯ ಸಂದೇಶವನ್ನು ನೀಡುವ ಚಿತ್ರವಾಗಿ ರಂಗಸಮುದ್ರ ಗಮನ ಸೆಳೆಯುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!