ಮಾರ್ಚ್ 8 ರಂದು ‘ರಂಗನಾಯಕ’ ರಿಲೀಸ್

 ನವರಸ ನಾಯಕ ಜಗ್ಗೇಶ್ ಅಭಿನಯದ ‘ರಂಗನಾಯಕ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. 

ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಚಿತ್ರವನ್ನು ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನಲ್ಲಿ 15 ವರ್ಷಗಳ ನಂತರ  ಸಿನಿಮಾ ತೆರೆಗೆ ಬರುತ್ತಿದ್ದುಕ್ಯುರಿಯಾಸಿಟಿ ಮೂಡಿಸಿದೆ. 15 ವರ್ಷಗಳ ಹಿಂದೆ ತೆರೆ ಕಂಡಿದ್ದ ಮಠ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಠ ಮತ್ತು ಎದ್ದೇಳು ಮಂಜುನಾಥ  ನಂತರ ನವರಸ ನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್ ನಲ್ಲಿ ರಂಗನಾಯಕ ಚಿತ್ರ ಬರುತ್ತಿದೆ.

‘ರಂಗನಾಯಕ’ ಸಿನಿಮಾದಲ್ಲಿ ರಚಿತಾ ಮಹಾಲಕ್ಷ್ಮೀ ನಾಯಕಿಯಾಗಿ ನಟಿಸುತ್ತಿದ್ದಾರೆ.  ತಮಿಳಿನ ಸೀರಿಯಲ್‌ಗಳಾದ ‘ಸರವಣನ್‌ ಮೀನಾಕ್ಷಿ’, ‘ನಾಮ್‌ ಇರುವರ್‌ ನಮಕ್‌ ಇರುವರ್‌’ ಮೂಲಕ ರಚಿತಾ ಮಹಾಲಕ್ಷ್ಮೀ ಈಗಾಗಲೇ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಇದು ಇವರ ಮೊದಲ ಸಿನಿಮಾ.

‘ರಂಗನಾಯಕ ಐತಿಹಾಸಿಕ ಸಿನಿಮಾವಾಗಿದೆ. ಜತೆಗೆ ಪ್ರಸ್ತುತ ದಿನದ ಕಥೆಯೂ ಸಹ ಸಿನಿಮಾದಲ್ಲಿದೆ. ರಂಗಗೀತೆಗಳ ಬಗ್ಗೆ ಉತ್ಸಾಹ ಇರುವ ಒಬ್ಬ ತುಂಟ ರಾಜನ ಕಥೆ ಬರೆದರೆ ಹೇಗೆ ಎಂದು ಯೋಚಿಸಿ ಇದನ್ನು ಬರೆದಿದ್ದೇನೆ ಎಂದು ಗುರುಪ್ರಸಾದ್‌ ಹೇಳಿದ್ದಾರೆ.

ಚಿತ್ರಕ್ಕೆ ಎ.ಆರ್.ವಿಖ್ಯಾತ್ ಬಂಡವಾಳ ಹೂಡಿದ್ದಾರೆ.  ಅನೂಪ್ ಸೀಳೀನ್ ಸಂಗೀತ ನೀಡಿದ್ದಾರೆ.  ಈ ಸಿನಿಮಾದ ಅರಮನೆ  ದೃಶ್ಯಗಳಿಗಾಗಿ ಬೆಂಗಳೂರು ಹೊರವಲಯದಲ್ಲಿರುವ ಪ್ರಜ್ವಲ್‌ ರಾಜ್‌ ಸ್ಟುಡಿಯೋದಲ್ಲಿ ಕಲಾನಿರ್ದೇಶಕ ಕುಲಕರ್ಣಿ ಅದ್ಧೂರಿ ಸೆಟ್‌ ಹಾಕಿದ್ದಾರೆ. ಉಮೇಶ್ ಸಂಕಲನ ಮತ್ತು ಅಶೋಕ್ ಸಾಮ್ರಾಟ್ ಛಾಯಾಗ್ರಹಣವಿದೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!