ಈ ವಾರ ತೆರೆ ಮೇಲೆ ರಾರಾಜಿಸಲಿರುವ ರಾಂಧವ

ಈ ವಾರ ಬಿಡುಗಡೆಯಾಗುತ್ತಿರುವ ಮತ್ತೊಂದು ಕುತೂಹಲ ಭರಿತ, ಸಾಹಸದ ಜೊತೆಗೆ ಪ್ರೇಮ ಕಥೆ ಸಹ ಒಳಗೊಂಡಿರುವ ಚಿತ್ರ `ರಾಂಧವ’.
ಭುವನ್ ಪೊನ್ನಣ್ಣ ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುನಿಲ್ ಆಚಾರ್ಯ ನಿರ್ದೇಶನದ ಮೊದಲ ಸಿನಿಮಾ ಇದು. ಈ ಚಿತ್ರದಿಂದ ಜನಪ್ರಿಯ ಹಿನ್ನಲೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶಕರಾಗಿ ಪರಿಚಯಗೊಳ್ಳುತ್ತಿದ್ದಾರೆ.

ಸುಕೃತಿ ಚಿತ್ರಾಲಯದ ಸನತ್ ಕುಮಾರ್ ಎಸ್ ಆರ್ ರಾಂಧವ ಚಿತ್ರವನ್ನು ನಿರ್ಮಿಸಿದ್ದಾರೆ. ಕಥಾ ನಾಯಕಿ ಅಪೂರ್ವ ಶ್ರೀನಿವಾಸ್. ಯಮುನ ಶ್ರೀನಿಧಿ, ಅರವಿಂದ್, ಮಂಜುನಾಥ್ ಹೆಗ್ಡೆ, ಲಕ್ಷ್ಮಣ್ ಹೆಗ್ಡೆ, ರೇಣು ಕುಮಾರ್, ಪ್ರದೀಪ್, ದಯಾನಂದ, ಜಹಾಂಗೀರ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ರಾಜ್ ಶಿವಶಂಕರ್ ಛಾಯಾಗ್ರಹಣ, ಮಹೇಶ್ ಸಂಕಲನ, ಜನಾರ್ಧನ್ ಕಲಾ ನಿರ್ದೇಶನ, ಮುತುರಾಜ್ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

This Article Has 2 Comments
  1. Pingback: additional hints

  2. Pingback: sexy stationary free lined printable

Leave a Reply

Your email address will not be published. Required fields are marked *

Translate »
error: Content is protected !!