ರಾಂಚಿ ಎಂಬ ಸ್ಥಳ ಜಾರ್ಖಂಡ್ ರಾಜ್ಯದ ರಾಜಧಾನಿ. ಈ ಸ್ಥಳದಲ್ಲಿ ಎಂಟು ವರ್ಷಗಳಿಂದ ಪೊಲೀಸ್ ಇಲಾಖೆ ಭೇದಿಸಲಾಗದ ಡಕಾಯಿತರ ಗುಂಪೊಂದು ಇತ್ತು. ಈ ಗುಂಪು ಇದೀಗ ಸಿನಿಮಾ ಕ್ಷೇತ್ರಕ್ಕೂ ಸಹ ಸೇರಿಕೊಂಡಿದೆ. ‘ರಾಂಚಿ’ ಎಂಬ ಹೆಸರಿನ ಚಿತ್ರವೊಂದು ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ಇದರ ಟೀಸರ್ ಬಿಡುಗಡೆಯಾಗಿದೆ.
ಈ ಚಿತ್ರದ ನಿರ್ದೇಶಕರು ಶಶಿಕಾಂತ್. ಅವರ ಧೈರ್ಯ, ಸಾಹಸ, ಬುದ್ಧಿವಂತಿಕೆಯನ್ನು ಮೆಚ್ಚಿ, ಹಿಂದಿ ಸಿನಿಮಾಗಳ ನಿರ್ಮಾಪಕರಾದ ರೂಪೇಶ್ ಅಹುಜಾ ಈ ಚಿತ್ರವನ್ನೂ ಹಿಂದಿಯಲ್ಲಿ ತಯಾರಿಸಲು ಮುಂದಾಗಿದ್ದಾರೆ. ರೂಪೇಶ್ ಅಹುಜಾ ಅವರ ತಂದೆ ಆಸಿಫ್ ಅಹುಜಾ 1947 ರಲ್ಲಿ ತಯಾರಾದ ಮುಘಲ್ ಎ ಆಜಂ ಚಿತ್ರ ನಿರ್ಮಾಣ ಮಾಡಿದವರು. ರೂಪೇಶ್ ಅಹುಜಾ ಮಾತನಾಡುತ್ತಾ ಶಶಿಕಾಂತ್ ಅವರ ಕೆಲಸ ಚಿತ್ರರಂಗವೇ ಹೆಮ್ಮೆ ಪಡುವಂತಹುದು ಎಂದು ಅವರನ್ನು ಶ್ಲಾಘಿಸಿದ್ದಾರೆ.
‘ರಾಂಚಿ’ ಕನ್ನಡ ಸಿನಿಮಾ ಸಂಪೂರ್ಣವಾಗಿ ‘ರಾಂಚಿ’ ರಾಜಧಾನಿಯಲ್ಲಿ ಚಿತ್ರೀಕರಣ ಆಗಿರುವುದು. ಪ್ರಭು ಮುಂಡ್ಕೂರ್ ನಾಯಕ, ದಿವ್ಯಾ ಉರುಡುಗ ನಾಯಕಿ. ತೋಟ ರಾಯ್ ಚೌಧರಿ, ಸುರೇಶ್ ಹೆಬ್ಳೀಕರ್, ಆರತಿ ನಾಯರ್, ಉಷಾ ಭಂಡಾರಿ, ಕಾರ್ತಿಕ್, ಲಕ್ಷ್ಮಣ್ ಗೌಡ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.
ವಿನೋದ್ ರಾಜ್ ಛಾಯಾಗ್ರಹಣ, ಸಂದೀಪ್ ಚೌತ ಹಾಗೂ ಅಲ್ವಿನ್ ಫರ್ನಾಂಡೀಸ್ ಸಂಗೀತ, ಪವನ್ ಭಟ್ ಸಂಭಾಷಣೆ, ಮಹೇಶ್ ಸಾಹಸ, ಮನು ಶೇದ್ಗರ್ ಸಂಕಲನ ಮಾಡಿರುವ ‘ರಾಂಚಿ’ ಚಿತ್ರದ ನಿರ್ಮಾಪಕರುಗಳು ರುದ್ರನಂದ, ಅರುಣ್ ಕುಮಾರ್ ಹಾಗೂ ಶಶಿಕಾಂತ್ ಗಟ್ಟಿ.
Pingback: hublot big bang replica
Pingback: Digital Transformation services