ಜುಲೈ 12ಕ್ಕೆ ‘ರಣಗಲ್‌’ ಮೊದಲ ಗ್ಲಿಮ್ಸ್

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್ ಜನ್ಮದಿನ ಜುಲೈ 12ಕ್ಕೆ ರಣಗಲ್‌ ಮೊದಲ ಗ್ಲಿಮ್ಸ್  ಬಿಡುಗಡೆಯಾಗಲಿದೆ.

ಇತ್ತೀಚೆಗಷ್ಟೇ ‘ರಣಗಲ್‌’ ಚಿತ್ರೀಕರಣ ಪೂರ್ಣಗೊಂಡಿತ್ತು. ಗೀತಾ ಶಿವರಾಜ್‌ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಅವರ ಸಮ್ಮುಖದಲ್ಲಿ ಚಿತ್ರತಂಡ ಕುಂಬಳಕಾಯಿ ಒಡೆದಿತ್ತು.

‘ಮಫ್ತಿ’ ಚಿತ್ರದಲ್ಲಿದ್ದ ‘ಭೈರತಿ ರಣಗಲ್‌’ ಪಾತ್ರದ ಹಿನ್ನೆಲೆ ಈ ಸಿನಿಮಾದಲ್ಲಿದ್ದು, ‘ಭೈರತಿ ರಣಗಲ್‌’ ಪಾತ್ರದ ಕಥೆ ಇದರಲ್ಲಿದೆ. ಲಾಯರ್‌ ಧಿರಿಸಿನಲ್ಲಿ ಶಿವರಾಜ್‌ಕುಮಾರ್‌ ಅವರ ಫಸ್ಟ್‌ಲುಕ್‌ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರದ ಕಥೆಯ ಬಗ್ಗೆ ಸಣ್ಣ ಸುಳಿವು ನೀಡಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍ , ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಮುಂತಾದ ಕಲಾವಿದರು ನಟಿಸಿದ್ದಾರೆ.

ಗೀತಾ ಶಿವರಾಜ್‌ಕುಮಾರ್‌ ಅವರು ತಮ್ಮ ‘ಗೀತಾ ಪಿಕ್ಚರ್ಸ್‌’ ಲಾಂಛನದಲ್ಲಿ ನಿರ್ಮಾಣ ಮಾಡಿರುವ ‘ಭೈರತಿ ರಣಗಲ್‌’ ಸಿನಿಮಾಗೆ ನರ್ತನ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

 ‘ಭೈರತಿ ರಣಗಲ್‌’ ಸಿನಿಮಾದ ಆಡಿಯೊ ಹಕ್ಕುಗಳನ್ನು ಆನಂದ್‌ ಆಡಿಯೊ ಖರೀದಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!