777 ಚಾರ್ಲಿ ತೆಲುಗು ವಿತರಕ ರಾಣಾ ದಗ್ಗುಬಾಟಿ

ರಕ್ಷಿತ್ ಶೆಟ್ಟಿ ನಟನೆ ‘777 ಚಾರ್ಲಿ’ ಸಿನಿಮಾದ ತೆಲುಗು ಆವೃತ್ತಿಯನ್ನು ಖ್ಯಾತ ನಟ ರಾಣಾ ದಗ್ಗುಬಾಟಿ ತೆಲುಗು ಭಾಷೆಯ ಅವೃತಿಯನ್ನು ವಿತರಣೆ ಮಾಡಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಿತ್ ಶೆಟ್ಟಿ, ”ಸ್ಪಷ್ಟ ಉದ್ದೇಶವೊಂದಿಂದಾಗಿ ನಾವು ಒಟ್ಟಾಗಿದ್ದೇವೆ. ನಮ್ಮ ಸಿನಿಮಾದ ವಿತರಣೆಗೆ ರಾಣಾ ದಗ್ಗುಬಾಟಿ ಹಾಗೂ ಸುರೇಶ್ ಪ್ರೊಡಕ್ಷನ್ ಜತೊ ಕೈಜೋಡಿಸುತ್ತಿರುವುದಕ್ಕೆ ಬಹಳ ಸಂತೋಶವಾಗಿದೆ. ಇವರು ‘777 ಚಾರ್ಲಿ’ ಸಿನಿಮಾದ ತೆಲುಗು ಆವೃತ್ತಿಯನ್ನು ವಿತರಣೆ ಮಾಡಲಿದ್ದಾರೆ. ನಾವು ಅಸಾಧಾರಣ ಪ್ರಯಾಣಕ್ಕೆ ಹೊರಟಿದ್ದೇವೆ” ಎಂದಿದ್ದಾರೆ.

ರಾಣಾ ದಗ್ಗುಬಾಟಿ, ಸಿನಿಮಾವನ್ನು ವೀಕ್ಷಿಸಿದ್ದು ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎಂದಿದ್ದಾರೆ.

‘777 ಚಾರ್ಲಿ’ ಸಿನಿಮಾವನ್ನು ವೀಕ್ಷಿಸುವ ಗೌರವ ನನಗೆ ದೊರಕಿತು. ಅದ್ಭುತವಾದ ಸಿನಿಮಾ ಇದು. ಭಿನ್ನವಾದ, ಆಹ್ಲಾದಕವಾರ ಮಾದರಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ” ಎಂದು ರಾಣಾ ಹೇಳಿದ್ದಾರೆ.

‘777 ಚಾರ್ಲಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಾಯಿ ಪ್ರಮುಖ ಪಾತ್ರದಲ್ಲಿ ಇದೆ. ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ, ದಾನಿಶ್ ಸೇಠ್, ಬಾಬಿ ಸಿಂಹ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜೂನ್ 10 ರಂದು ಕನ್ನಡ, ತೆಲುಗು, ತಮಿಳು,ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!