ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಪ್ರೇಮಕಾವ್ಯವಾಗಿದ್ದು, ಈ ಸಿನಿಮಾ ನೋಡಿದವರಿಗೆ ಪ್ರೀತಿ-ಪ್ರೇಮ ಮಧುರ ಎನಿಸುತ್ತದೆ ಎಂದು ನಿರ್ಮಾಪಕಿ ರಮ್ಯಾ ಹೇಳಿದ್ದಾರೆ.
ಸಿನಿಮಾ ನೋಡುಗರಿಗೆ ಒಂದು ಸುಂದರ, ಕಾವ್ಯಾತ್ಮಕ ಹಾಗೂ ಸೌಮ್ಯ ಅನುಭವ ನೀಡಲಿದೆ. ಈ ಚಿತ್ರ ನಿಮ್ಮನ್ನು ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಿಸುತ್ತದೆ ಎಂದು ರಮ್ಯಾ ತಿಳಿಸಿದ್ದಾರೆ.
ಮೊದಲ ಬಾರಿನಿರ್ಮಾಪಕಿ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡಿ ಅನೇಕ ವಿಚಾರ ತಿಳಿದಿದ್ದೇನೆ. ನನಗೆ ಇದು ಅದ್ಭುತವಾದ ಅನುಭವ ಎಂದು ರಮ್ಯಾ ಹೇಳಿದ್ದಾರೆ.
ಕಳೆದ ವರ್ಷದ ವಿಜಯದಶಮಿ ವೇಳೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಘೋಷಣೆ ಮಾಡಲಾಯಿತು. ಈ ಸಿನಿಮಾ ಕೇವಲ 18 ದಿನಗಳಲ್ಲಿ ಶೂಟಿಂಗ್ ಮುಕ್ತಾಯ ಕಂಡಿದೆ.
ರಾಜ್ ಬಿ ಶೆಟ್ಟಿ, ಸಿರಿ ಪ್ರೇಮಕಥೆಯಲ್ಲಿ ಒಂದು ಭಾವುಕ ಪ್ರಯಾಣ ಇರಲಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಪ್ರೇರಣಾ ಮತ್ತು ಅನಿಕೇತ್ ಎಂಬ ಎರಡು ಪಾತ್ರಗಳ ನಡುವಿನ ಕಥೆ ಈ ಸಿನಿಮಾದ ಮುಖ್ಯ ಅಂಶವಾಗಿದೆ.
ಸಿನಿಮಾದಲ್ಲಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೀಘ್ರವೇ ತೆರೆ ಮೇಲೆ ಬರಲಿದೆ.
__

Be the first to comment