ಹಸೆಮಣೆ ಏರಲು ರೆಡಿಯಾದ ರಮ್ಯಾ?

ಸ್ಯಾಂಡಲ್‌ವುಡ್ ಕ್ವೀನ್  ರಮ್ಯಾ ಸೈಲೆಂಟ್ ಆಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಇದೇ ನವೆಂಬರ್ ತಿಂಗಳಲ್ಲಿ ರಮ್ಯಾ ಮದುವೆಯಾಗುವ ಸಾಧ್ಯತೆ ಇದ್ದು ತೆರೆಮರೆಯಲ್ಲಿ ಈಗಾಗಲೇ ಮದುವೆ ತಯಾರಿ ಶುರುವಾಗಿದೆ.  ಸದ್ಯದಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ. ರಮ್ಯಾ ಅವರು ಖ್ಯಾತ ಉದ್ಯಮಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ.

ಉದ್ಯಮಿ ಯಾರು ಅನ್ನೋ ಗುಟ್ಟನ್ನು ರಮ್ಯಾ ಅವರು ಇನ್ನೂ ಬಿಟ್ಟು ಕೊಟ್ಟಿಲ್ಲ. ಆದರೆ  ಮಾಹಿತಿ ಪ್ರಕಾರ ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಅವರನ್ನು ರಮ್ಯಾ ವಿವಾಹ ಆಗಲಿದ್ದಾರೆ ಎನ್ನಲಾಗಿದೆ.

 2003ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ್ದಾರೆ. 41 ವರ್ಷದ ರಮ್ಯಾ ಇದೀಗ ಮದುವೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಸಿನಿಮಾ ರಂಗದ ಜೊತೆ ರಮ್ಯಾ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. 2013ರಲ್ಲಿ  ಮಂಡ್ಯದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ರಮ್ಯಾ ಗೆಲುವು ಸಾಧಿಸಿದ್ದರು. ಅವರು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಘಟಕದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಈಗಲೂ ಬೇಡಿಕೆಯ ನಟಿಯಾಗಿರುವ ರಮ್ಯಾ ಅವರ ಮದುವೆಯ ಬಗ್ಗೆ ಅಭಿಮಾನಿಗಳು ಕುತೂಹಲ ತಾಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!