ಸಿನಿಮಾ ರಂಗದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ವೇತನ ಸಮಾನತೆ ಬರಲಿ ಎಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಆಗ್ರಹಿಸಿದ್ದಾರೆ.
ಬಿಸಿಸಿಐ ಪುರುಷ ಕ್ರಿಕೆಟಿಗರಂತೆ ಮಹಿಳಾ ಕ್ರಿಕೆಟಿಗರೂ ಸಮಾನ ವೇತನ ನೀಡುವ ನಿರ್ಧಾರ ಪ್ರಕಟಿಸಿದೆ. ಇದರ ಬೆನ್ನಲ್ಲೇ ರಮ್ಯಾ ಅವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಸಿನಿಮಾ ರಂಗದಲ್ಲಿ ಮಹಿಳೆ ಮತ್ತು ಪುರುಷ ಕಲಾವಿದರ ಸಂಭಾವನೆಗೆ ತೀರಾ ವ್ಯತ್ಯಾಸವಿದೆ. ಎಷ್ಟೇ ದೊಡ್ಡ ಹೀರೋಯಿನ್ ಆಗಿದ್ದರೂ ಮಹಿಳಾ ಕಲಾವಿದರಿಗೆ ಸಿಗುವ ಸಂಭಾವನೆ ಪುರುಷರಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಸಿನಿಮಾ ರಂಗದಲ್ಲೂ ಈ ರೀತಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ವೇತನ ಸಮಾನತೆ ಬರಲಿ ಎಂದು ರಮ್ಯಾ ಆಗ್ರಹಿಸಿದ್ದಾರೆ.
ಬಿಸಿಸಿಐ ಸಮಾನ ವೇತನ ನಿರ್ಧಾರವನ್ನು ರಮ್ಯಾ ಶ್ಲಾಘಿಸಿದ್ದಾರೆ.
___

Be the first to comment