39ಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಇಂದು ಜನ್ಮದಿನದ ಸಂಭ್ರಮ. ಈ ಹಿನ್ನೆಲೆ ರಮ್ಯಾ ಅವರ ಬರ್ತ್ ಡೇಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಶುಭ ಕೋರಿದ ಎಲ್ಲರಿಗೂ ರಮ್ಯಾ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ನಟಿ ತನಗೀಗ 39 ವರ್ಷ ವಯಸ್ಸಾಯ್ತು ಎಂದೂ ಹೇಳಿಕೊಂಡಿದ್ದಾರೆ.

” ನಿಮ್ಮ ಹಾರೈಕೆಗೆ ಧನ್ಯವಾದಗಳು. ಸದ್ಯಕ್ಕೆ ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗಿದೆ. ಹಾಗಿದ್ದರೂ 39 ನೇ ವಯಸ್ಸನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ರಮ್ಯಾ.

ಚಿತ್ರರಂಗದಿಂದ ದೂರವಿದ್ದರೂ ರಮ್ಯಾರನ್ನು ಅಭಿಮಾನಿಗಳು, ಸ್ಯಾಂಡಲ್ ವುಡ್ ಮರೆತಿಲ್ಲ. ಪುನೀತ್ ರಾಜ್ ಕುಮಾರ್ ನಟನೆಯ ಅಭಿ ಚಿತ್ರದಿಂದ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ ಅವರು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದರು. ಬಹು ಬೇಡಿಕೆಯ ನಟಿ ಆಗಿದ್ದ ರಮ್ಯಾ ಅವರು ಸಿನಿಮಾದಲ್ಲಿ ಬೇಡಿಕೆ ಇರುವಾಗಲೇ ರಾಜಕೀಯಕ್ಕೆ ಧುಮುಕಿದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಸಂಸದರಾಗಿ ಆಯ್ಕೆಯಾದರು.

ಈಗ ರಾಜಕೀಯ ಹಾಗೂ ಸಿನಿಮಾದಿಂದ ರಮ್ಯಾ ಅವರು ಅಂತರ ಕಾಯ್ದುಕೊಂಡಿದ್ದಾರೆ. ಈಗಲೂ ರಮ್ಯಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ಕರೆತರುವ ಯತ್ನ ನಡೆಯುತ್ತಿದೆ. ಆದರೆ ರಮ್ಯಾ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!