Ramya: ಹುಡುಗನ್ನ ನೋಡಿ ನೋಡಿ ಸಾಕಾಗೋಯ್ತು ಎಂದ ರಮ್ಯಾ

ಹುಡುಗನ್ನ ನೋಡಿ ನೋಡಿ ಸಾಕಾಗೋಯ್ತು. ನೀವೇ ಹುಡುಗನನ್ನು ಹುಡುಕಿಕೊಡಿ ಎಂದು ಹೇಳುವ ಮೂಲಕ ಸ್ಯಾಂಡಲ್‌ ವುಡ್‌ ಕ್ವೀನ್‌ ರಮ್ಯಾ ಅವರು ಅಚ್ಚರಿ ಮೂಡಿಸಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ರಮ್ಯಾ ಅವರು ಮದುವೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಗೌಡರ ಹುಡುಗನನ್ನು ಹುಡುಕಿ, ಮದುವೆ ಆಗ್ತೀನಿ ಎಂದು ಹೇಳಿ ಹುಬ್ಬೇರುವಂತೆ ಮಾಡಿದರು.

ಪ್ರಚಾರಕ್ಕೆ ಬಂದಿದ್ದ ರಮ್ಯಾ ಅವರನ್ನು ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಈ ಪೈಕಿ ಮದುವೆ ಯಾವಾಗ ಆಗ್ತೀರಾ? ಎಂಬುದು ಪ್ರಮುಖವಾಗಿತ್ತು.

‘ನನಗೂ ಹುಡುಗನ್ನ ನೋಡಿ ನೋಡಿ ಸಾಕಾಗೋಯ್ತು. ಮಂಡ್ಯದಲ್ಲೇ ಸ್ವಯಂವರ ಮಾಡಿ’ ಎಂದು ರಮ್ಯಾ ಹಾಸ್ಯ ಚಟಾಕಿ ಹಾರಿಸಿದರು.

ಉತ್ತರಕಾಂಡ ಹೆಸರಿನ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ರಮ್ಯಾ ನಿರ್ವಹಿಸುತ್ತಿದ್ದಾರೆ. ಅವರು ಈ ಬಾರಿಯ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಸಕ್ರೀಯರಾಗಿದ್ದು, ಮಂಡ್ಯ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!