ಈ ಹಿಂದೆ ಅಶ್ಲೀಲ ಕಮೆಂಟ್‌ಗಳು ಮತ್ತು ಮೆಸೇಜ್ ಹಾಕಿ ಅರೆಸ್ಟ್ ಆಗಿ ಈಗ ಕೇಸ್ ವಾಪಸ್ ತಗೊಳ್ಳಿ ಎಂದ ದರ್ಶನ್ ಅಭಿಮಾನಿಗಳಿಗೆ ನಟಿ ರಮ್ಯಾ ಖಡಕ್ ಉತ್ತರ ಕೊಟ್ಟಿದ್ದಾರೆ.
‘ಅಭ್ಯರ್ಥಿಗಳು ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ಈ ಪ್ರಕರಣದ ಮೂಲಕ ಮತ್ತೆ ತಪ್ಪು ನಡೆಯಬಾರದು ಎಂಬ ಸಂದೇಶ ನೀಡಲು ಮುಂದಾಗಿದ್ದೇನೆ. ಶಿಕ್ಷೆ ಕೊಡಿಸುವ ಉದ್ದೇಶ ನನ್ನಲ್ಲಿಲ್ಲ. ಮುಖ್ಯವಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿ, ಹೆಣ್ಣುಮಕ್ಕಳ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಬೇಕು’ ಎಂದು ರಮ್ಯಾ ಹೇಳಿದ್ದಾರೆ.
‘ಅವರ ಪೋಷಕರು ನನ್ನನ್ನು ಭೇಟಿಯಾಗಬೇಕಾದ ಅಗತ್ಯವಿಲ್ಲ. ಬದಲಾಗಿ ತಮ್ಮ ಮಕ್ಕಳಿಗೆ ನಡವಳಿಕೆ, ಕಾನೂನಿನ ಪ್ರಕಾರ ಸರಿಯಾದ ವರ್ತನೆ ಹೇಗೆ ಇರಬೇಕು ಎಂಬುದನ್ನು ತಿಳಿಸಬೇಕು. ಮೊಬೈಲ್, ಇನ್ಸ್ಟಾಗ್ರಾಮ್ ಬಳಕೆ ವೇಳೆ ಗಮನ ಇರಬೇಕು” ಎಂದಿದ್ದಾರೆ.
ಮತ್ತೆ ನಟಿಸುವ ಬಗ್ಗೆ ಮಾತನಾಡಿದ ರಮ್ಯಾ, ‘ಹಲವಾರು ಕಥೆ ಕೇಳಿದ್ದೇನೆ. ಐತಿಹಾಸಿಕ ಮತ್ತು ಪೌರಾಣಿಕ ಶೈಲಿಯ ಸಿನಿಮಾಗಳನ್ನು ಮಾಡಲು ಆಸೆ ಇದೆ. ಈಗಾಗಲೇ ಹಿಟ್ ನಿರ್ದೇಶಕರೊಬ್ಬರೊಂದಿಗೆ ಹೊಸ ಚಿತ್ರದ ಯೋಜನೆ ಶುರು ಮಾಡಲಾಗಿದೆ’ ಎಂದಿದ್ದಾರೆ.
—-





Be the first to comment