ರಮೇಶ್ ಅರವಿಂದ್ ಅವರು ‘ಶಿವಾಜಿ ಸುರತ್ಕಲ್’ 2 ಚಿತ್ರದ ಮೂಲಕ ಶೀಘ್ರವೇ ತೆರೆಯಮೇಲೆ ಕಾಣಿಸಿಕೊಳ್ಳಲಿದ್ದಾರೆ. ‘ಶಿವಾಜಿ ಸುರತ್ಕಲ್’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರತಂಡ ಎರಡನೇ ಭಾಗವನ್ನು ಶೂಟಿಂಗ್ ಮಾಡಲು ಮುಂದಾಗಿದೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬ ಪ್ರಯುಕ್ತ ಚಿತ್ರತಂಡ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಿದ್ದು ಸದ್ಯದಲ್ಲಿಯೇ ಶೂಟಿಂಗ್ ಕೂಡ ಆರಂಭವಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಶಿವಾಜಿ ಸುರತ್ಕಲ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಆಕಾಶ್ ಶ್ರೀವತ್ಸ ಅವರು ಭಾಗ-2ನ್ನು ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಮತ್ತು ಅನೂಪ್ ಈ ಸಿನಿಮಾಕ್ಕೂ ಬಂಡವಾಳ ಹೂಡಲಿದ್ದಾರೆ.
ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ನಿರ್ದೇಶಕ ಆಕಾಶ್ ಯೋಜನೆ ರೂಪಿಸಿದ್ದಾರೆ. ರಮೇಶ್ ಅರವಿಂದ್ ಈ ಚಿತ್ರದಲ್ಲಿ ಎರಡು- ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮೊದಲ ಭಾಗಕ್ಕಿಂತ ಭಿನ್ನವಾಗಿ, ಸೀಕ್ವೆಲ್ ಶಿವಾಜಿಯನ್ನು ಕರ್ನಾಟಕದಾದ್ಯಂತ ಚಿತ್ರೀಕರಿಸಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
ರಮೇಶ್ ಅರವಿಂದ್ ಜೊತೆಗೆ ರಾಧಿಕಾ ನಾರಾಯಣನ್, ರಘು ರಾಮನಕೊಪ್ಪ, ವಿದ್ಯಾ ಮೂರ್ತಿ ಸೇರಿದಂತೆ ದೊಡ್ಡ ತಾರಾಗಣ ನಟಿಸಲಿಡ್. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಅವರ ಬ್ಯಾನರ್ ನಲ್ಲಿ ಅಂಜನಾದ್ರಿ ಸಿನಿ ಕಂಬೈನ್ಸ್ ನಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಗುರುಪ್ರಸಾದ್ ಎಂಜಿ ಛಾಯಾಗ್ರಹಣವಿದೆ.
ಪ್ರೇಕ್ಷಕರಿಂದ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಚಿತ್ರ ತಂಡ ಕಳೆದ ವರ್ಷವೇ ಚಿತ್ರದ ಮುಂದಿನ ಭಾಗವನ್ನು ನಿರ್ಮಿಸುವುದಾಗಿ ಹೇಳಿತ್ತು.
Be the first to comment