ನಿರ್ಮಾಪಕ ರಮೇಶ್ ಕಶ್ಯಪ್,
ಕಥೆಗಾರ, ಸಂಭಾಷಣೆಗಾರ ಹಾಗೂ ನಿರ್ದೇಶಕ ಅಜಯ್ಕುಮಾರ್
ಸಾಹಸ ನಿರ್ದೇಶಕ, ನಟ ಥ್ರಿಲ್ಲರ್ ಮಂಜು
ಇತ್ತೀಚೆಗಷ್ಟೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬೆಂಗಳೂರಿನ ಸಿಎಮ್ಆರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಅದರ ಬೆನ್ನಲ್ಲೇ ಈಗ ಕನ್ನಡ ಚಿತ್ರರಂಗದ ಮೂವರು ಸಾಧಕರಿಗೆ ಪ್ರತಿಷ್ಠಿತ ಸಂಸ್ಥೆಯೊಂದು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ನಿರ್ಮಾಪಕ ರಮೇಶ್ ಕಶ್ಯಪ್, ಕಥೆಗಾರ, ಸಂಭಾಷಣೆಗಾರ ಹಾಗೂ ನಿರ್ದೇಶಕ ಅಜಯ್ಕುಮಾರ್. ಸಾಹಸ ನಿರ್ದೇಶಕ, ನಟ ಥ್ರಿಲ್ಲರ್ ಮಂಜು ಇವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದವರಲ್ಲಿ ವರನಟ ಡಾ.ರಾಜ್ಕುಮಾರ್ ಮೊದಲಿಗರು. ಆನಂತರ ಶಿವರಾಜ್ಕುಮಾರ್, ರವಿಚಂದ್ರನ್ ಸೇರಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು
ನ್ಯಾಷನಲ್ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್ ಸಂಸ್ಥೆಯು ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇವರನ್ನು ಗುರ್ತಿಸಿ ಈ ಸಾಧಕರಿಗೆ ಗೌರವ ಡಾಕ್ಟರೇಟ್ ದಯಪಾಲಿಸಿದೆ. ಚಿತ್ರರಂಗದಲ್ಲಿ ಸುಮಾರು 25 ವರ್ಷಗಳಿಂದಲೂ ನಿರ್ಮಾಪಕರಾಗಿ ಅನೇಕ ಸದಭಿರುಚಿಯ ಚಲನಚಿತ್ರಗಳನ್ನು ನಿರ್ಮಿಸಿ ಯಶಸ್ವಿ ನಿರ್ಮಾಪಕ ಎನಿಸಿಕೊಂಡಿರುವ ರಮೇಶ್ ಕಶ್ಯಪ್, 30-35 ವರ್ಷಗಳಿಂದ ನಟ, ಬರಹಗಾರ ಹಾಗೂ ನಿರ್ದೇಶಕನಾಗಿ ನೂರಾರು ಯಶಸ್ವೀ ಚಲನಚಿತ್ರಗಳಿಗೆ ಕೆಲಸ ಮಾಡಿರುವ ಅಜಯ್ಕುಮಾರ್ ಅಲ್ಲದೆ ಸುಮಾರು 30 ವರ್ಷಗಳಿಂದಲೂ ಸಾಹಸ ನಿರ್ದೇಶಕ, ನಿರ್ದೇಶಕ ಹಾಗೂ ನಟನಾಗಿಯೂ ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಸೇವೆ ಸಲ್ಲಿಸಿರುವ ಥ್ರಿಲ್ಲರ್ ಮಂಜು, ಈ ಮೂವರ ಗಣನೀಯ ಸಾಧನೆಯನ್ನು ಗುರುತಿಸಿದ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿದೆ. ಥ್ರಿಲ್ಲರ್ ಮಂಜು ತಮಿಳು, ತೆಲುಗು ಸೇರಿದಂತೆ ಸರಿಸುಮಾರು 650ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ ಬಂದಿದ್ದ ಪೊಲೀಸ್ ಸ್ಟೋರಿ, ಜಾಕಿ ಚಾನ್ ಸೇರಿದಂತೆ ಹಲವಾರು ಚಿತ್ರಗಳು ಯಶಸ್ವೀ ಪ್ರದರ್ಶನ ಕಂಡಿದ್ದವು.
@ಬಿಸಿನಿಮಾಸ್ ಸುದ್ದಿ
Pingback: CI/CD