ರಮೇಶ್​ ಅರವಿಂದ್​ @ 54

ಸ್ಯಾಂಡಲ್​ವುಡ್ ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್​​​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಮೇಶ್ ಇಂದು 54 ವರ್ಷದ ಬರ್ತ್​ ಡೇ ಆಚರಿಸಿಕೊಳ್ಳುತ್ತಿದ್ದಾರೆ. 1964 ಸೆಪ್ಟೆಂಬರ್ 10 ರಂದು ಗೋವಿಂದಾಚಾರಿ ಅರವಿಂದ್ ಹಾಗೂ ಸರೋಜಾ ಅರವಿಂದ್​​​​ ಪುತ್ರನಾಗಿ ತಮಿಳುನಾಡಿನ ಕುಂಭಕೋಣಂನಲ್ಲಿ ರಮೇಶ್​​​ ಜನಿಸಿದರು. ಬೆಂಗಳೂರು ಯೂನಿವರ್ಸಿಟಿಯಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ರಮೇಶ್ ಅರವಿಂದ್ ಅವರನ್ನು 1986 ರಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ‘ಸುಂದರ ಸ್ವಪ್ನಗಳು’ ಸಿನಿಮಾ ಮೂಲಕ ಸಿನಿರಂಗಕ್ಕೆ ಪರಿಚಯಿಸಿದರು. ಈ ಸಿನಿಮಾವನ್ನು ಸ್ವತಃ ಬಾಲಚಂದರ್ ಅವರೇ ನಿರ್ದೇಶಿಸಿದ್ದರು.

ಕನ್ನಡದ ಮೌನಗೀತೆ, ಮನೆಯೇ ಮಂತ್ರಾಲಯ, ಏಳು ಸುತ್ತಿನ ಕೋಟೆ, ಕೆಂಪು ಗುಲಾಬಿ, ಶಾಂತಿಕ್ರಾಂತಿ, ಗರುಡಧ್ವಜ, ಅಮೆರಿಕ ಅಮೆರಿಕ, ತಮಿಳಿನ ಉನ್ನಲ್ ಮುಡಿಯುಮ್ ತಂಬಿ, ತೆಲುಗಿನ ಓ ಭಾರ್ಯ ಕಥಾ, ಮಲಯಾಳಂನ ಅವನ್ ಅನಂತಪದ್ಮನಾಭನ್ ಸೇರಿ ಸುಮಾರು 136 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಮೇಶ್​ ಅರವಿಂದ್ ನಟಿಸಿದ್ದಾರೆ. ಅವರ ಸಾಧನೆಗೆ ಕರ್ನಾಟಕ ಸ್ಟೇಟ್ ಅವಾರ್ಡ್​, ಫಿಲ್ಮ್​ ಫೇರ್ ಅವಾರ್ಡ್, ಆಂಧ್ರ ಸ್ಟೇಟ್ ನಂದಿ ಅವಾರ್ಡ್​ ಸೇರಿ ಸಾಕಷ್ಟು ಪ್ರಶಸ್ತಿಗಳು ಕೂಡಾ ಲಭಿಸಿವೆ.

ಬಹಳಷ್ಟು ಸಿನಿಮಾಗಳನ್ನು ರಮೇಶ್ ನಿರ್ದೇಶಿಸಿದ್ದಾರೆ. ಬೆಳ್ಳಿತೆರೆ ಮಾತ್ರವಲ್ಲ, ಅವರು ಕಿರುತೆರೆಯಲ್ಲೂ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಖಾಸಗಿ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ರಮೇಶ್​​​​​ರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಖಾಸಗಿ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡದ ಕೋಟ್ಯಧಿಪತಿ’ ಶೂಟಿಂಗ್​​​​​ನಲ್ಲಿ ಸದ್ಯಕ್ಕೆ ರಮೇಶ್ ಬ್ಯುಸಿ ಇದ್ದಾರೆ.

This Article Has 3 Comments
  1. Pingback: her comment is here

  2. Pingback: Digital Transformation Company

  3. Pingback: 툰코

Leave a Reply

Your email address will not be published. Required fields are marked *

Translate »
error: Content is protected !!