ಮಾರ್ಚ್ 26ಕ್ಕೆ ‘ರಾಮಾಯಣ’ ಪಾತ್ರ ಪರಿಚಯ

ಯಶ್ ಅಭಿನಯದ ‘ರಾಮಾಯಣ’ ಚಿತ್ರದ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸಲು ಮಾರ್ಚ್ 26ಕ್ಕೆ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 26ಕ್ಕೆ ರಾಮ ನವಮಿ ಆಚರಿಸಲಾಗುತ್ತಿದೆ. ನಿರ್ಮಾಪಕ ನಮಿತ್ ಮಲ್ಹೋತ್ರ ‘ರಾಮಾಯಣ’ ಸಿನಿಮಾದ ಪಾತ್ರಗಳನ್ನು ನೇರವಾಗಿ ಪರಿಚಯಿಸಲು ನಿರ್ಧರಿಸಿದ್ದಾರೆ. ಮುಂಬೈನ ಗೇಟ್​ ವೇ ಆಫ್ ಇಂಡಿಯಾದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

‘ರಾಮಾಯಣ’   ಸಿನಿಮಾದ ಪೋಸ್ಟರ್   ಕಳೆದ ವರ್ಷ ಅನಾವರಣಗೊಂಡಿತ್ತು. ಆದರೆ ಎಲ್ಲಾ ಪೋಸ್ಟರ್​​ಗಳು ಗ್ರಾಫಿಕ್ಸ್ ಮಾದರಿಯಲ್ಲಿ ಇದ್ದವು.  ಈ ಪಾತ್ರಗಳನ್ನು ಎಲ್ಲರಿಗೂ ಅಧಿಕೃತವಾಗಿ ಪರಿಚಯಿಸಲು  ಸಮಾರಂಭ ಆಯೋಜನೆಗೊಂಡಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ.

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ಕ್ಕೆ ತೆರೆ ಕಾಣಲಿದೆ. ಇದಾದ ನಂತರ ರಾಮ ನವಮಿಯಂದು ‘ರಾಮಾಯಣ’ ಚಿತ್ರದ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸಲು ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದೆ.  ಬಾಲಿವುಡ್  ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯ ವಿಐಪಿಗಳನ್ನು ನಿರೀಕ್ಷಿಸಬಹುದಾಗಿದೆ.  ರಣಬೀರ್ ಅವರು ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಕೊಟ್ಟಿದ್ದಾರೆ ಎಂದು ವರದಿ ಆಗಿದೆ.

ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆ ಪಾತ್ರ, ಯಶ್ ರಾವಣನ ಪಾತ್ರ, ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!