ಜುರಾಸಿಕ್ ಪಾರ್ಕಿಗಿಂತ ದುಬಾರಿ ರಾಮಾಯಣ ಚಿತ್ರ!

ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸುತ್ತಿರುವ ರಾಮಾಯಣ ಸಿನಿಮಾದ ಒಟ್ಟಾರೆ ಬಜೆಟ್ 4,000 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.

ನಿರ್ಮಾಪಕರಲ್ಲಿ ಒಬ್ಬರಾದ ನಿಮಿತ್ ಮಲ್ಹೋತ್ರ ಅವರು ಸಂದರ್ಶನದಲ್ಲಿ ರಾಮಾಯಣ ಭಾಗ 1 ಹಾಗೂ 2 ಚಿತ್ರಗಳಿಗೆ ಅಂದಾಜು 4000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದೇವೆ. ಇಡೀ ಪ್ರಪಂಚ ನೋಡಬೇಕಾದ ಕಥೆಯನ್ನು ದೊಡ್ಡದಾಗಿ ತೆರೆಗೆ ತರುತ್ತಿದ್ದೇವೆ ಎಂದಿದ್ದಾರೆ.

ರಾಮಾಯಣ ಸಿನಿಮಾದ ಬಜೆಟ್ 500 ರಿಂದ 600 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಆದರೆ ನಿರ್ಮಾಪಕರು ಈ ಬಗ್ಗೆ ಅಸಲಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಆಧುನಿಕ ಟೆಕ್ನಾಲಜಿ ಬಳಸಿಕೊಂಡು ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ಬಜೆಟ್ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಹಾಲಿವುಡ್ ಚಿತ್ರಗಳಾದ ಜುರಾಸಿಕ್ ವರ್ಲ್ಡ್, ರೀ ಬರ್ತ್, ಸೂಪರ್ ಮ್ಯಾನ್ ಸಿನಿಮಾಗಳಿಗಿಂತ ರಾಮಾಯಣ ಚಿತ್ರ ಹೆಚ್ಚು ದುಬಾರಿ ಆಗಿದೆ.

ರಾಮಾಯಣ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ.

ದುಬಾರಿ ವೆಚ್ಚದ ಜೊತೆಗೆ ಬಹು ತಾರಾ ಬಳಗವನ್ನು ಒಳಗೊಂಡಿರುವ ರಾಮಾಯಣ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಯಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!