ನಿತೇಶ್ ತಿವಾರಿ ಸಾರಥ್ಯದ ‘ರಾಮಾಯಣ’ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ‘ರಾಮಾಯಣ’ ಚಿತ್ರದ ಟೀಸರ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಮೇರಿಂದ 1 4,ರವೆರೆಗೆ ನಡೆಯಲಿರುವ ಮೊದಲ ವಿಶ್ವ ಆಡಿಯೋ ವಿಷುಯಲ್ & ಎಂಟರ್ಟೈನ್ಮೆಂಟ್ ಶೃಂಗಸಭೆ-ವೇವ್ಸ್ ವೇದಿಕೆಯಲ್ಲಿ ರಾಮಾಯಣದ ಮೊದಲ ಝಲಕ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ಚಿತ್ರರಂಗದ ವಿವಿಧ ತಾರೆಯರು ಈ ವೇದಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಇಲ್ಲಿ ಟೀಸರ್ ಅಥವಾ ಪೋಸ್ಟರ್ ಲಾಂಚ್ ಮಾಡಿದರೆ ಪ್ರೇಕ್ಷಕರಿಗೆ ತಲುಪಲಿದೆ ಎಂಬ ಐಡಿಯಾವನ್ನು ಚಿತ್ರತಂಡ ಹಾಕಿಕೊಂಡಿದೆ.
ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಮತ್ತು ರಾಕಿಭಾಯ್ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಮುಂಬೈನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಎರಡು ಭಾಗಗಳಾಗಿ ‘ರಾಮಾಯಣ’ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಮೊದಲ ಭಾಗ ಮುಂದಿನ ವರ್ಷದ ದೀಪಾವಳಿ 2026 ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗ 2027ಕ್ಕೆ ಬಿಡುಗಡೆ ಆಗುವುದು ಖಚಿತವಾಗಿದೆ.
—

Be the first to comment