ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ, ಬಹು ಕೋಟಿ ವೆಚ್ಚದ ರಾಮಾಯಣ ಸಿನಿಮಾದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿಲೀಸ್ ಆಗಿದೆ.
ಆಕ್ಷನ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್‌ನ ಖ್ಯಾತ ಸ್ಟಂಟ್ ನಿರ್ದೇಶಕ ಗೈ ನೋರಿಸ್ ಆಕ್ಷನ್ ಸೀಕ್ವೆನ್ಸ್ ನಿರ್ದೇಶನ ಮಾಡುತ್ತಿದ್ದಾರೆ. ರಾಮಾಯಣ ಸಿನಿಮಾಗಾಗಿ ಬೃಹತ್ ಸೆಟ್‌ಗಳನ್ನು ಹಾಕಲಾಗಿದೆ. ಜಾಗತೀಕ ಮಟ್ಟಕ್ಕೆ ರಾವಣನ ಪಾತ್ರ ತಲುಪಿಸಲು ಯಶ್ ಸಿದ್ದವಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಜೊತೆ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೋಡಿಯಾಗಿರೋದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ. ಹಾಲಿವುಡ್ ನ ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಮತ್ತು ದಿ ಸುಸೈಡ್ ಸ್ಕ್ವಾಡ್‌ಗಳಲ್ಲಿ ಸ್ಟಂಟ್ ಡೈರೆಕ್ಷನ್ ಮಾಡಿರೋ ಗೈ ನೋರಿಸ್ ‘ರಾಮಾಯಣ’ ಸಿನಿಮಾಗೆ ಯಾವ ರೀತಿ ಸ್ಟಂಟ್ಸ್ ಡೈರೆಕ್ಷನ್ ಮಾಡ್ತಾರೆ ಎನ್ನುವ ಕುತೂಹಲ ಮೂಡಿದೆ. ಸಿನಿಮಾದಲ್ಲಿ ವರ್ಲ್ಡ್ ಫೇಮಸ್ ವಿಎಫ್ ಎಕ್ಸ್ ತಂಡಗಳು ಕೆಲಸ ಮಾಡುತ್ತಿವೆ.
ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸುತ್ತಿದ್ದಾರೆ. ಯಶ್ ಹಾಗೂ ರಣಬೀರ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಯಶ್ ರಾಮಾಯಣ ಚಿತ್ರಕ್ಕೆ ಕೋ ಪ್ರೊಡ್ಯೂಸರ್ ಆಗಿದ್ದಾರೆ.
ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ರಾಮಾಯಣ ಭಾಗ 1, 2026, ದೀಪಾವಳಿಗೆ ಬಿಡುಗಡೆಯಾಗಲಿದೆ. ಎರಡನೇ ಭಾಗ 2027ಕ್ಕೆ ಬಿಡುಗಡೆಯಾಗಲಿದೆ.






Be the first to comment