ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋದ ರಾಮ್ ಚರಣ್ ?

ರಾಮ್ ಚರಣ್ ಅಯ್ಯಪ್ಪ ಮಾಲಧಾರಿಯಾಗಿ ಪತ್ನಿ ಉಪಾಸನಾ ಜೊತೆ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಎಣ್ಣೆ  ಪಾರ್ಟಿಯಲ್ಲಿ ಭಾಗವಹಿಸಿದ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. 

ಅಲ್ಲು ಸಿರೀಶ್ ಮದುವೆ ಮುನ್ನ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಗಣ್ಯರನ್ನು, ಆತ್ಮೀಯರನ್ನು ಅಲ್ಲು ಅರ್ಜುನ್ ಆಹ್ವಾನಿಸಿದ್ದರು.  ಮದ್ಯ, ನೃತ್ಯ ಎಲ್ಲವೂ ಇದ್ದ ಈ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿ  ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅಯ್ಯಪ್ಪ ಮಾಲಾಧಾರಿಯಾಗಿ ರಾಮ್ ಚರಣ್ ಪಾರ್ಟಿಯಲ್ಲಿ ಭಾಗವಹಿಸಿದ ಬಗ್ಗೆ ಪ್ರಶ್ನೆಗಳು ಎದ್ದಂತೆ ಅಲ್ಲು ಸಿರೀಶ್ ಪ್ರತಿಕ್ರಿಯೆ ನೀಡಿ,  ‘ಸ್ವಾಮಿ  (ರಾಮ್ ಚರಣ್) ಯಾರೂ  ಮದ್ಯವನ್ನು ಮುಟ್ಟುವ ಮೊದಲೇ   ಬಂದು ಶುಭ ಹಾರೈಸಿ ಹೊರಟು ಬಿಟ್ಟರು’ ಎಂದಿದ್ದಾರೆ.

ರಾಮ್ ಚರಣ್  ಅಯ್ಯಪ್ಪ ಭಕ್ತರಾಗಿದ್ದಾರೆ.  ಅವರು ಮಾಲಧಾರಣೆ ಮಾಡುತ್ತಲೇ ಇರುತ್ತಾರೆ. ಮಾಲಧಾರಣೆ ಮಾಡಿದಾಗ ಚಪ್ಪಲಿ  ಧರಿಸದೆ ಅವರು  ಕಟ್ಟುನಿಟ್ಟಿನಿಂದ ನಿಯಮಗಳನ್ನು ಪಾಲನೆ ಮಾಡುತ್ತಾರೆ. ರಾಮ್ ಚರಣ್  ಮಾಲಾಧಾರಿಯಾಗಿ ಯಾವುದೇ ಕೆಟ್ಟ ಚಟುವಟಿಕೆಯ ಭಾಗ ಆಗಿಲ್ಲ ಎಂಬುದನ್ನು ಅಲ್ಲು ಸಿರೀಶ್ ಖಾತ್ರಿ ಪಡಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!