ರಾಮ್ ಚರಣ್ ಅಭಿನಯದ ಹೊಸ ಚಿತ್ರಕ್ಕೆ ‘ಪೆಡ್ಡಿ’ ಎಂದು ಶೀರ್ಷಿಕೆ ಅಂತಿಮಗೊಳಿಸಲಾಗಿದೆ.
ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾರ್ಚ್ 27 ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಪೋಸ್ಟರ್‌ನಲ್ಲಿ ರಾಮ್ ಚರಣ್ ತಮ್ಮ ಸ್ಟೈಲಿಶ್ ಮತ್ತು ತೀವ್ರವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಸೃಷ್ಟಿಸಿದೆ.
ಫಸ್ಟ್ ಲುಕ್ ನಲ್ಲಿ ರಾಮ್ ಚರಣ್ ಗ್ರಾಮೀಣ ಹಿನ್ನೆಲೆಯಲ್ಲಿ ಗಡ್ಡವಿರುವ ಒರಟಾದ ಲುಕ್ ನಲ್ಲಿ ಕಾಣುತ್ತಿದ್ದಾರೆ. ಈ ಲುಕ್ ಅನ್ನು ಪ್ರಸಿದ್ಧ ಕೇಶ ವಿನ್ಯಾಸಕಿ ಆಲಿಮ್ ಹಕೀಮ್ ರಚಿಸಿದ್ದಾರೆ.
ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಚಿತ್ರ ನಿರ್ಮಿಸುತ್ತಿವೆ. ಬುಚಿಬಾಬು ಸನಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ರಾಮ್ ಚರಣ್ ಅಭಿನಯದ ಕೊನೆಯ ಚಿತ್ರ ‘ಗೇಮ್ ಚೇಂಜರ್’ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲವಾಯಿತು. ಅಭಿಮಾನಿಗಳು ಈಗ ರಾಮ್ ಚರಣ್ ಅವರ ‘ಪೆಡ್ಡಿ’ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದಾರೆ.
—

Be the first to comment