ವಾಸುದೇವ ಎಸ್‌ಎನ್ ಚೊಚ್ಚಲ ನಿರ್ದೇಶನದ ‘ರಕ್ತಾಕ್ಷ’ ಚಿತ್ರದ ಟ್ರೈಲರ್ ಜುಲೈ 11ಕ್ಕೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಸಾಯಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧೀರೇಂದ್ರ ದಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ, ಆದರ್ಶ್ ಛಾಯಗ್ರಹಣವಿದೆ.
ಚಿತ್ರದಲ್ಲಿ ರೋಹಿತ್ ಸೇರಿದಂತೆ ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರೂಪ ರಾಯಪ್ಪ, ಗುರುದೇವ್ ನಾಗರಾಜ್, ರಚನಾ ದಶರಥ್, ಬಸವರಾಜ ಆದಾಪುರ್, ವಿಲಾಸ್ ಕುಲಕರ್ಣಿ ತಾರಾ ಬಳಗದಲ್ಲಿದ್ದಾರೆ.
ರೋಹಿತ್ ಅಭಿನಯದ ಈ ಚಿತ್ರ ಈಗಾಗಲೇ ನಿರೀಕ್ಷೆ ಮೂಡಿಸಿದೆ.

Be the first to comment