ಸ್ಯಾoಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನದ ಚಿತ್ರಗಳನ್ನು ಯುವ ಪಡೆಗಳು ಮಾಡುತ್ತಾ ಬರುತ್ತಿದ್ದಾರೆ. ಆ ನಿಟಿನಲ್ಲಿ ’ದಕ್ಷ’ ಮತ್ತು ’ಬಿಂಬ’ ಚಿತ್ರಗಳು ಒಂದೇ ಜಾಗ ಮತ್ತು ಶಾಟ್‌ದಲ್ಲಿ ಚಿತ್ರೀಕರಣಗೊಂಡಿದ್ದು ಸುದ್ದಿಯಾಗಿತ್ತು. ಅದೆಲ್ಲಾಕ್ಕಿಂತಲೂ ಭಿನ್ನ ಎನ್ನುವಂತೆ “ರಕ್ತ ಗುಲಾಬಿ” ಸಿನಿಮಾವೊಂದು ಸಕಲೇಶಪುರ, ಅರೇಹಳ್ಳಿ, ಬೆಳ್ಳಾವರ ಸೇರಿದಂತೆ ಇಪ್ಪತ್ತೈದು ಸ್ಥಳಗಳಲ್ಲಿ ಶೂಟಿಂಗ್ ನಡೆಸಿರುವುದು ವಿಶೇಷ.
ಮುಂಜಾನೆ 5.55ಕ್ಕೆ ಕ್ಯಾಮಾರ ಆನ್ ಆಗಿ ನಿರಂರವಾಗಿ ಹತ್ತು ಕಿ.ಮೀ ಓಡಾಡಿ ಬೆಳಿಗ್ಗೆ 8.08ಕ್ಕೆ ಮುಗಿಸಿದ್ದು ಸಾಹಸಗಾಥೆಯಾಗಿದೆ. ಇದರಿಂದ ಚಿತ್ರವು ಲಿಮ್ಕಾ/ಇಂಡಿಯಾ ಬುಕ್ ಆಫ್ ರೆಕಾರ್ಡ್‌ದಲ್ಲಿ ದಾಖಲಾಗಿದೆ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನಿಸ್ ದಾಖಲೆಗೆ ನೊಂದಣಿಯಾಗಿದೆ. ಕೌರ್ಯ ಮತ್ತು ಪ್ರೀತಿ ನಡುವಿನ ಸಂಕೇತವೆಂದು ಕತೆಯು ಸಾರುತ್ತದೆ.
ಬ್ಯಾಂಕ್ ಉದ್ಯೋಗಿಯಾಗಿರುವ ರಾಬಿ ಅಂಶಕಾಲಿಕ ಸಮಯದಲ್ಲಿ ಸಿನಿಮಾದ ಗಂಧ ಗಾಳಿ ತಿಳಿದುಕೊಂಡು, ಪೂರ್ಣ ಪ್ರಮಾಣದಲ್ಲಿ ಚಿತ್ರಕ್ಕೆ ರಚನೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇವರ ನಂಬಿಕೆ ಇಟ್ಟು ಲೋಹಿತ್ ಅವರು ಮಿಷಿನ್ ಕಾಡ್ ಫಿಲಿಂಸ್ ಮುಖಾಂತರ ಸುಮಾರು ನಲವತ್ತು ಲಕ್ಷ ಬಂಡವಾಳ ಹೂಡಿದ್ದಾರೆ.
ಸಾಮಾಜಿಕ ವ್ಯವಸ್ಥೆಯಿಂದ ಮನನೊಂದ ಯುವಕನೊಬ್ಬ ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಮತ್ತೋಂದು ವ್ಯವಸ್ಥೆಯನ್ನು ಸೇರಿಕೊಳ್ಳುತ್ತಾನೆ. ಇದರ ಮದ್ಯೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿ ಉಳಿಸಿಕೊಳ್ಳಲು ದೂರದ ಜಾಗಕ್ಕೆ ತೆರಳುವಾಗ ತನ್ನವರಿಂದಲೂ ಮತ್ತು ಪೋಲೀಸರಿಂದಲೂ ಕಷ್ಟಗಳು ಎದುರಾಗುತ್ತದೆ. ಅದರಿಂದ ಸಪಲರಾಗುತ್ತಾರಾ? ಅಥವಾ ಬಂದಿಯಾಗುತ್ತಾರಾ? ಎಂಬುದು ಒಂದು ಏಳೆಯ ಕ್ರೈಂ ಥ್ರಿಲ್ಲರ್ ಸಾರಾಂಶವಾಗಿದೆ.
ರಂಗಭೂಮಿ ಕಲಾವಿದ ವಿಕ್ರಮಾದಿತ್ಯ ನಾಯಕ. ಶಿವಾನಿ ನಾಯಕಿ. ಉಳಿದಂತೆ ಮಾಣಿಕ್ಯ.ಜಿ.ಎನ್, ಭರತ್, ರಾಮು, ವಿನೋದ್‌ಕುಮಾರ್, ಸಿದ್ದರಾಮ, ಲೋಹಿತ್‌ಕುಲಕರ್ಣಿ, ಪ್ರವೀಣ್‌ಬಾಲಗೌಡರ್ ಮುಂತಾದವರು ನಟಿಸಿದ್ದಾರೆ.
ಒಂದು ಗೀತೆಗೆ ಪ್ರಜೋತ್‌ಡೇಸಾ ಸಂಗೀತ, ರಾವಣನ್ ಛಾಯಾಗ್ರಹಣ, ವಿಜಯ್‌ಕುಮಾರ್ ಸಂಕಲನ, ಮುಸಾಸಿಜಿಪೌಲ್ ದೃಶ್ಯಗಳಿಗೆ ಕಲರ‍್ಸ್‌ಗಳನ್ನು ತುಂಬಿಸಿದ್ದಾರೆ. 2.13 ನಿಮಿಷದ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಎಂದು 6 ತಿಂಗಳು ಸಮಯ ತೆಗೆದುಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೈಲರ್‌ನ್ನು ಮಾದ್ಯಮದವರಿಗೆ ತೋರಿಸಲಾಯಿತು. ಅಂದುಕೊಂಡಂತೆ ಆದರೆ ಮಾರ್ಚ್ ಮೊದಲವಾರದಲ್ಲಿ ಸಿನಿಮಾವು ತೆರೆಕಾಣುವ ಸಾದ್ಯತೆ ಇದೆ.
Be the first to comment