ಕನ್ನಡದ ನಾಯಕ ನಟ ರಕ್ಷಿತ್ ಶೆಟ್ಟಿ ಕಾಲಿವುಡ್ಗೆ ಕಾಲಿಡುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಮೊದಲ ಬಾರಿ ತಮ್ಮ ಚಿತ್ರ ಜೀವನದಲ್ಲಿ ತಮಿಳು ಸಿನಿಮಾವೊಂದನ್ನ ಒಪ್ಪಿದ್ದಾರೆ. ಶೀಘ್ರ ಸಿನಿಮಾ ಶೂಟಿಂಗ್ ಕೂಡ ಶುರು ಆಗಲಿದೆ.
ವಾರಿಸು ಯಶಸ್ಸಿನಲ್ಲಿರುವ ವಿಜಯ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಅರ್ಜುನ್ ಸರ್ಜಾ, ಕಮಲ್ ಹಾಸನ್ ಮತ್ತು ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿದ್ದಾರೆ ಎಂದು ಹೇಳಲಾಗಿದೆ.
ಚಿತ್ರವನ್ನು ಮಾಸ್ಟರ್ ಚಿತ್ರದ ಡೈರೆಕ್ಟರ್ ಲೋಕೇಶ್ ಕನಕರಾಜ್ ಡೈರೆಕ್ಟ್ ಮಾಡುತ್ತಿದ್ದಾರೆ. ಈ ವಿಷಯ ಈಗಾಗಲೇ ಅನೌನ್ಸ್ ಆಗಿದೆ.
ರಕ್ಷಿತ್ ಶೆಟ್ಟಿ ಇಲ್ಲಿವರಗೆ ಬೇರೆ ಭಾಷೆಯ ಸಿನಿಮಾ ಮಾಡಿಲ್ಲ. ಆದರೆ ರಕ್ಷಿತ್ ಅಭಿನಯದ ಚಾರ್ಲಿ 777 ಚಿತ್ರ ತಮಿಳು ಸೇರಿದಂತೆ ಬೇರೆ ಭಾಷೆಗೆ ಡಬ್ ಆಗಿತ್ತು.
__
Be the first to comment