ಜೀ ವಾಹಿನಿಗೆ ರಕ್ಷಿತಾ ಪ್ರೇಮ್ ಗುಡ್ ಬೈ

ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದ ರಕ್ಷಿತಾ ಪ್ರೇಮ್,  ರಿಯಾಲಿಟಿ ಶೋಗಳಿಗೆ  ಗುಡ್‌ಬೈ ಹೇಳಿದ್ದಾರೆ.

ರಕ್ಷಿತಾ ಅವರ ಈ ದಿಢೀರ್‌ ನಿರ್ಧಾರದಿಂದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣವೇನು ಎಂದು ರಕ್ಷಿತಾ ಪ್ರೇಮ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ.

ಕಳೆದ 9 ವರ್ಷಗಳಿಂದ ನಾನು ಕೆಲಸ ಮಾಡಿದ್ದ ಚಾನೆಲ್‌ನಲ್ಲಿ ನಾನು ಈಗ ಇಲ್ಲ. ಜೀವನದಲ್ಲಿ ಬದಲಾವಣೆ ಬೇಕು. ನನ್ನ ಕಮ್ಫರ್ಟ್‌ ಝೋನ್‌ನಿಂದ ನಾನು ಹೊರಗೆ ಬರಬೇಕು. ಹೊಸದನ್ನೇನಾದರೂ ಟ್ರೈ ಮಾಡಬೇಕು. ಹೀಗಾಗಿ, ನಾನು ಡ್ಯಾನ್ಸ್‌ ಶೋನಲ್ಲೂ ಭಾಗಿಯಾಗುತ್ತಿಲ್ಲ. ವೀಕ್ಷಕರು ಇಲ್ಲಿಯವರೆಗೂ ನನಗೆ ತೋರಿದ ಪ್ರೀತಿಗೆ ನಾನು ಚಿರಋಣಿ. ನಾನು ಅಲ್ಲಿ ಕಳೆದ ಸುಂದರ ಕ್ಷಣಗಳನ್ನ ಮರೆಯಲು ಸಾಧ್ಯವಿಲ್ಲ. ಎಲ್ಲರ ಆಶೀರ್ವಾದದೊಂದಿಗೆ ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದ್ದೇನೆ. ನಾನು ವಾಪಸ್ ಬಂದಾಗ ಅದೇ ಪ್ರೀತಿ ತೋರಿಸುತ್ತೀರಾ ಎಂಬ ಭರವಸೆ ಇದೆ. ಧನ್ಯವಾದಗಳು ಎಂದು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು” ರಿಯಾಲಿಟಿ ಶೋ ಮೂಲಕ ರಕ್ಷಿತಾ ಪ್ರೇಮ್‌ 2017ರಲ್ಲಿ ತೀರ್ಪುಗಾರರಾಗಿ ಎಂಟ್ರಿ ನೀಡಿದ್ದರು. ಬಳಿಕ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಸೇರಿದಂತೆ ಇವುಗಳ ಸರಣಿ ಶೋಗಳಲ್ಲಿ ತೀರ್ಪುಗಾರರಾಗಿ ಹಲವು ವರ್ಷಗಳಿಂದ ಕಾಣಿಸಿಕೊಂಡಿದ್ದರು.

ಇನ್ನು ಮುಂದೆ ರಿಯಾಲಿಟಿ ಶೋ ಕಾರ್ಯಕ್ರಮ ಹಾಗೂ ವಾಹಿನಿಯ ಭಾಗವಲ್ಲ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!