ಡಿ.16ಕ್ಕೆ ರಾಕ್ಷಸರು ತೆರೆಗೆ

ಸಾಯಿಕುಮಾರ್ ನಟನೆಯ ‘ರಾಕ್ಷಸರು’ ಸಿನಿಮಾ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆ ಆಗಲಿದೆ.

“ನನಗೆ ಭಾವನಾತ್ಮಕ ಕಥೆಗಳ ಬಗ್ಗೆ ಒಲವು ಇದೆ. ಇದೇ ಮೊದಲ ಬಾರಿಗೆ ನಾನು ಕ್ರೈಮ್ ಥ್ರಿಲ್ಲರ್ ಅನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ. ಸಾಯಿಕುಮಾರ್ ಈ ಚಿತ್ರದಲ್ಲಿರುವುದು ನನಗೆ ಸಂತೋಷವಾಗಿದೆ ಎಂದು ನಿರ್ದೇಶಕ ಅಜಯ್ ಕುಮಾರ್ ತಿಳಿಸಿದ್ದಾರೆ.

ಹೆತ್ತವರು ಸಿನಿಮಾ ನಂತರ ನಿರ್ದೇಶಕರು ಮತ್ತು ನಟ ಸಾಯಿ ಕುಮಾರ್ ಮತ್ತೆ ಒಂದಾಗಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳು ಕಳೆದಿವೆ. 25 ವರ್ಷದ ಹಿಂದ ತೆರೆಕಂಡ ಪೊಲೀಸ್ ಸ್ಟೋರಿ ನನಗೆ ಹೆಸರು ತಂದುಕೊಟ್ಟಿತ್ತು. ನನ್ನ ತಂದೆ-ತಾಯಿ ಕೂಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ನನ್ನ ಮಕ್ಕಳು ನಟನೆಗೆ ಬಂದರೆ ನನ್ನ ತರ ಆಗುತ್ತಾರೆ ಅಂತ ಅಪ್ಪ ನಮಗೆ ಚಿತ್ರರಂಗ ಬೇಡ ಎಂದಿದ್ದರು. ತಾಯಿಗೆ ಮಾತ್ರ ನಾವು ನಟಿಸಲಿ ಅನ್ನೋದಿತ್ತು ಎಂದು ಸಾಯಿ ಕುಮಾರ್ ತಿಳಿಸಿದ್ದಾರೆ.

ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!