ಚರಣ್ ರಾಜ್ ನಿರ್ದೇಶನದ ‘ಭ್ರಮೆ’ ಚಿತ್ರದ ಟ್ರೇಲರ್ ಶಿಕ್ಷಕರ ದಿನದಂದು ಬಿಡುಗಡೆಯಾಗಿದೆ. ನೈಜ ಘಟನೆಯನ್ನು ಆಧರಿಸಿ ತಯಾರಾದ ಸಿನಿಮಾ ಇದು. ನವೆಂಬರ್ 1 ರಂದು ಸಿನಿಮಾ ‘ನಮ್ಮ ಫ್ಲಿಕ್ಸ್’ನಲ್ಲಿ ಬಿಡುಗಡೆಯಾಗುತ್ತಿದೆ.ಹೊಸದಾಗಿ ಸ್ಥಾಪನೆ ಆಗಿರುವ ‘ನಮ್ಮ ಫ್ಲಿಕ್ಸ್’ ಇತ್ತೀಚೆಗಷ್ಟೇ ಹೊಸ ವರ್ಷನ್ ಕೂಡಾ ಬಿಡುಗಡೆ ಮಾಡಿತ್ತು. ಇದೀಗ ‘ನಮ್ಮ ಫ್ಲಿಕ್ಸ್’ನಲ್ಲಿ ಮೊದಲ ಬಾರಿಗೆ ‘ಭ್ರಮೆ’ ಸಿನಿಮಾ ಬಿಡುಗಡೆಯಾಗುತ್ತಿದ್ದು ಈ ಮೂಲಕ ಸಿನಿಮಾ ವ್ಯಾಪರಕ್ಕೂ ಕಾಲಿಟ್ಟಿದೆ.
“ಇದು ನಾನು ಭಾಗವಹಿಸುವಂತಹ ಮೊದಲ ಸಿನಿಮಾ ಸಮಾರಂಭ” ಎಂದರು ಸಾಹಿತಿ ವಿ ನಾಗೇಂದ್ರ ಪ್ರಸಾದ್! ಬಹುಶಃ ಅವರು ಲಾಕ್ಡೌನ್ ಬಳಿಕದ ನಡೆಯುತ್ತಿರುವ ಮಾಧ್ಯಮಗೋಷ್ಠಿಯ ಬಗ್ಗೆ ಹೇಳಿದ್ದು ಇರಬಹುದು. ತಾವೇ ಸಂಗೀತ ಮತ್ತು ಸಾಹಿತ್ಯ ನೀಡಿರುವ “ಭ್ರಮೆ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
“ಹೊಸ ರೂಪದಲ್ಲಿ, ಥಿಯೇಟರ್‌ನಾಚೆ ಕೂಡಾ ಬಿಡುಗಡೆ ಆಗುವ ಕಾಲಘಟ್ಟದ ಆರಂಭ ಕಾಲದಲ್ಲಿ ನಾವು ಇದ್ದೇವೆ. ಈ ಚಿತ್ರದ ನಾಯಕ ನವೀನ್ ನಿರ್ದೇಶಕ ಎ.ಟಿ ರಘು ಸರ್ ಮಗ. ಬಹಳ ಚೆನ್ನಾಗಿ ಮಾಡಿದ್ದಾನೆ. ಚಿತ್ರದ ಹೆಸರೇ ಹೇಳುವ ಹಾಗೆ ತುಂಬಾ ಭ್ರಮೆಗಳನ್ನು ಚಿತ್ರದಲ್ಲಿ ಪೆಯಿಂಟ್ ಮಾಡಲಾಗಿದೆ. ತುಂಬಾ ಕಡಿಮೆ ಕಲಾವಿದರು ಒಂದು ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ಎಲ್ಲರಿಗೂ ಒಳ್ಳೆಯದಾಗಲಿ. ನಿರ್ಮಾಪಕರಿಗೆ ಹಾಕಿರೋ ಹಣ ಬರಲಿ. ನಿರ್ದೇಶಕರಿಗೆ ಒಳ್ಳೆಯ ಹೆಸರು ಬರಲಿ. ಎಲ್ಲರಿಗೂ ಒಳ್ಳೆಯ ಭವಿಷ್ಯ ಸಿಗಲಿ” ಎಂದು ನಾಗೇಂದ್ರ ಪ್ರಸಾದ್ ಹಾರೈಸಿದರು.
ಚಿತ್ರದ ನಾಯಕಿ ಐಶಾನ ಸಣ್ಣಪ್ಪನವರ್ ಮಾತನಾಡಿ “ಇದು ನನ್ನ ಮೊದಲನೆ ಸಿನಿಮಾ. ಮೊದಲನೆ ಸಲ ನನಗೆ ಇಂಥದೊಂದು ಟೀಮ್ ಸಿಕ್ಕಿರೋದು ಅದೃಷ್ಟ. ಚರಣ್ ಮಾಸ್ಟರ್, ಚಾಮರಾಜ್ ಸರ್, ದೊರೈಭಗವಾನ್ ಸರ್ ಮೊದಲಾದವರೆಲ್ಲ ಇಲ್ಲಿದ್ದೀರಿ. ಅಲ್ಲದೆ ಇವತ್ತು ಟೀಚರ್ಸ್ ಡೇಯೂ ಹೌದು. ಚಿತ್ರ ನವೆಂಬರ್ ಒಂದಕ್ಕೆ ರಿಲೀಸ್ ಆಗ್ತಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಕನ್ನಡ ರಾಜ್ಯೋತ್ಸವ ದ ದಿನ ಬಿಡುಗಡೆ ಆಗ್ತಿರುವ ಈ ಕನ್ನಡ ಸಿನಿಮಾ ನೋಡಿ ಬೆಳೆಸಿ ಎಂದರು.
ಮಜಾ ಟಾಕೀಸ್ ಪವನ್ ಮಾತನಾಡಿ, “ಜನರಿಗೆ ತುಂಬಾ ಕಷ್ಟ ಆಗ್ತಿದೆ. ಯಾವುದು ನೋಡಬೇಕು ಯಾವುದು ನೋಡಬಾರದು ಅಂತ ತೀರ್ಮಾನ ತಗೆದುಕೊಳ್ಳಲು. ಇಂತಹ ಸಂದರ್ಭದಲ್ಲಿ `ನಮ್ಮ ಫ್ಲಿಕ್ಸ್’ ಎನ್ನುವ ಒಂದು ಕನ್ನಡದ್ದೇ ಆ್ಯಪ್ ಸೃಷ್ಟಿಸಿ ಬರೀ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡ್ತಾ ಇರೋದು ಒಂದು ಒಳ್ಳೆ ಪ್ರಯತ್ನ. ಭ್ರಮೆ ಚಿತ್ರದ ಬಗ್ಗೆ ಹೇಳಬೇಕೆಂದರೆ ರಿಯಲ್ ಇನ್ಸ್ ಡೆಂಟನ್ನು ತಗೊಂಡು ಅದಕ್ಕೆ ಬಣ್ಣಗಳನ್ನು ತುಂಬಿ ಮಾಡಿರುವ ಚಿತ್ರ. ನನ್ನದೊಂದು ಕಾಮಿಡಿ ಕ್ಯಾರೆಕ್ಟರ್. ಹಾಸ್ಪಿಟಲ್ ನಲ್ಲಿರುವಂಥ ಅಟೆಂಡರ್ ಪಾತ್ರ. ಇಡೀ ತಂಡ ಹೊಸ ತಂಡ. ಹೊಸ ಪ್ರಯತ್ನ ಮಾಡಿದೆ” ಎಂದರು. ನವ ನಿರ್ದೇಶಕ ಚರಣ್ ರಾಜ್ ಚಿತ್ರದ ನಿರ್ದೇಶಕರು. ಹಿರಿಯ ನಿರ್ದೇಶಕ ಭಗವಾನ್ ಅವರು ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಕೋರಿದರು.
https://youtu.be/U9tuUQZuNiM
Pingback: diet sehat