ಅಶ್ಲೀಲ ಚಿತ್ರ ತಯಾರಿ ಮಾಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ರಾಜ್ ಕುಂದ್ರಾ ಅವರು ತಮ್ಮ ಮೇಲೆ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಕಾಮಸೂತ್ರ 3ಡಿ ಸಿನಿಮಾ ಖ್ಯಾತಿಯ ನಟಿ ಶೆರ್ಲಿನ್ ಚೋಪ್ರಾ ದೂರಿದ್ದಾರೆ.
“2019ರ ಆರಂಭದಲ್ಲಿ ಆ್ಯಪ್ ಬ್ಯುಸಿನೆಸ್ಗಾಗಿ ರಾಜ್ ಕುಂದ್ರಾ ಅವರು ನನ್ನನ್ನು ಕರೆದಿದ್ದರು. ಮೀಟಿಂಗ್ ಮುಗಿದ ಬಳಿಕ ಅವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದರು. ನಾನು ಬೇಡ ಎಂದರೂ ಅವರು ಬಲವಂತವಾಗಿ ಕಿಸ್ ಮಾಡಲು ಬಂದರು. ಇದನ್ನೆಲ್ಲ ನಿಲ್ಲಿಸುವಂತೆ ವಿನಂತಿಸಿದೆ. ಬಳಿಕ ಅವರನ್ನು ತಳ್ಳಿ ಶೌಚಾಲಯದಲ್ಲಿ ಅಡಗಿಕೊಂಡೆ ” ಎಂದು ದೂರಿನಲ್ಲಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ರಾಜ್ ಕುಂದ್ರಾ ಬಗ್ಗೆ ಹಲವು ಆರೋಪಗಳನ್ನು ಮಾಡಲಾಗಿದ್ದು ಇವುಗಳಲ್ಲಿ ಲೈಂಗಿಕ ಹಲ್ಲೆ ಮಾಡಿದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ.
ರಾಜ್ ಕುಂದ್ರಾ ಜೊತೆ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಅಶ್ಲೀಲ ಚಿತ್ರಗಳ ತಯಾರಿ ಬಗ್ಗೆ ತನಿಖೆ ಮುಂದುವರಿದಿದ್ದು ಪ್ರಕರಣದಲ್ಲಿ ಅನೇಕ ನಟಿಯರ ಹೆಸರುಗಳು ಹೊರಬರುತ್ತಿವೆ. ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿಗೆ ಪೊಲೀಸರು ಇನ್ನೂ ಕ್ಲೀನ್ ಚಿಟ್ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ ಕುಂದ್ರಾ ಅವರನ್ನು ಮುಂಬೈ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Be the first to comment