ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋಗಳ ಮೂಲಕ ಇದುವರೆಗೆ 1.17 ಕೋಟಿ ರೂ. ಹಣ ಸಂಪಾದನೆ ಮಾಡಿರುವ ವಿಷಯ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಕಳೆದ ವರ್ಷದ ಆಗಸ್ಟ್‌ನಿಂದ ಡಿಸೆಂಬರ್ ತಿಂಗಳಲ್ಲಿ ದೊಡ್ಡ ಹಣವನ್ನು ಕುಂದ್ರಾ ಅಶ್ಲೀಲ ವಿಡಿಯೋಗಳಿಂದ ಸಂಪಾದನೆ ಮಾಡಿದ್ದಾರೆ. 2023ರ ವೇಳೆಗೆ 34 ಕೋಟಿ ರೂಪಾಯಿ ಲಾಭ ಪಡೆಯುವ ಗುರಿಯನ್ನು ರಾಜ್ ಕುಂದ್ರಾ ಹೊಂದಿದ್ದರು. ದಿನನಿತ್ಯ 6 ರಿಂದ 8 ಲಕ್ಷ ರೂಪಾಯಿ ಹಣವನ್ನು ಕುಂದ್ರಾ ಗಳಿಸುತ್ತಿದ್ದರು ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಕುಂದ್ರಾ ಮಾಲೀಕತ್ವದ ಆಪ್‌ಗಳನ್ನು ಲಕ್ಷಾಂತರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಹಲವರು ಚಂದಾದಾರರಾಗಿ ವಿಡಿಯೋ ನೋಡುತ್ತಿದ್ದರು. ಇದರಿಂದ ಕುಂದ್ರಾ ಅವರಿಗೆ ಸಾಕಷ್ಟು ಹಣ ಹರಿದು ಬರುತ್ತಿತ್ತು.
ಮುಂಬೈ ಪೊಲೀಸರು ಕುಂದ್ರಾ ಅವರ ಬ್ಯಾಂಕ್ ಖಾತೆಗಳನ್ನು ವಶಕ್ಕೆ ತೆಗೆದುಕೊಂಡು ಅವುಗಳ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ವಿಶೇಷ ಆಡಿಟರ್ ನ್ನು ನೇಮಿಸಲಾಗಿದೆ.
ಅಶ್ಲೀಲ ಚಿತ್ರ ತಯಾರಿ ಸಂಬಂಧ ರಾಜ್ ಕುಂದ್ರಾ ಸಲ್ಲಿಸಿರುವ ಜಾಮೀನು ಅರ್ಜಿ ವಜಾ ಆಗಿದೆ. ಕುಂದ್ರಾ ಇನ್ನೂ ಕೆಲವು ದಿನ ಜೈಲು ವಾಸ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ.
Be the first to comment