ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಅವುಗಳನ್ನು ಮೊಬೈಲ್ ಆಪ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ವಿರುದ್ಧ ಅನೇಕ ನಟಿಯರು ಹರಿಹಾಯ್ದಿದ್ದಾರೆ.
ಯೂಟ್ಯೂಬ್ ಸ್ಟಾರ್ ಪುನೀತ್ ಕೌರ್ ಅವರು “ಕುಂದ್ರಾ ಜೈಲಲ್ಲಿ ಕೊಳೆಯಲಿ” ಎಂದು ಶಾಪ ಹಾಕಿದ್ದಾರೆ.
“ರಾಜ್ ಕುಂದ್ರಾ ಬೆತ್ತಲೆ ಚಿತ್ರಗಳಲ್ಲಿ ನಟಿಸುವಂತೆ ತಮಗೆ ಆಫರ್ ನೀಡಿದ್ದರು. ಈ ಸಂಬಂಧ ಮೊಬೈಲ್ ಸಂದೇಶವನ್ನು ಕಳುಹಿಸಿದ್ದರು. ನಾನು ಎರಡು ಬಾರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ನಟಿ ಸಾಗರಿಕಾ ಸೋನಾ ಸುಮನ್ ಕೂಡ ಕುಂದ್ರಾ ವಿರುದ್ಧ ಕಿಡಿ ಕಾರಿದ್ದಾರೆ.
“ತಮ್ಮನ್ನು ಬೆತ್ತಲೆ ಚಿತ್ರಗಳಲ್ಲಿ ನಟಿಸುವಂತೆ ರಾಜ್ ಕುಂದ್ರಾ ಒತ್ತಾಯ ಮಾಡಿದ್ದರು” ಎಂದು ಆರೋಪಿಸಿದ್ದಾರೆ.
ಬೆತ್ತಲೆ ಚಿತ್ರಗಳಲ್ಲಿ ನಟಿಸುವ ನಟಿಯರಿಗೆ ಒಂದು ಚಿತ್ರಕ್ಕೆ 30 ಲಕ್ಷ ರೂಪಾಯಿ ನೀಡಿ ರಾಜ್ ಕುಂದ್ರಾ 60 ಲಕ್ಷ ರೂಪಾಯಿಗೂ ಹೆಚ್ಚಿನ ಆದಾಯ ಗಳಿಸುತ್ತಿದ್ದರು. ಲಾಕ್ ಡೌನ್ ಅವಧಿಯಲ್ಲಿ ಈ ರೀತಿಯ ಚಿತ್ರಗಳನ್ನು ಹೆಚ್ಚು ನಿರ್ಮಾಣ ಮಾಡಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.
ರಾಜ್ ಕುಂದ್ರಾ ಅವರನ್ನು ಮುಂಬೈ ನ್ಯಾಯಾಲಯ ಜುಲೈ 23ರ ತನಕ ಪೊಲೀಸರ ವಶಕ್ಕೆ ವಿಚಾರಣೆಗೆ ಒಪ್ಪಿಸಿದೆ.
_____________

Be the first to comment