ಬಿಚ್ಚುಗತ್ತಿ ನಾಯಕ ರಾಜವರ್ಧನ್ ನಾಲ್ಕನೇ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ.
ಗಜರಾಮ ಎಂಬ ಶೀರ್ಷಿಕೆಯ ಈ ಚಿತ್ರ ಆಕ್ಷನ್ ಎಂಟರ್‌ಟೈನರ್ ಆಗಿದೆ. ಯೋಗರಾಜ್ ಭಟ್ ಮತ್ತು ಸೂರಿ ಜೊತೆ ಕೆಲಸ ಮಾಡಿದ್ದ ಸುನಿಲ್ ಕುಮಾರ್ ವಿಎ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಬಾಂಡ್ ರವಿ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಗಜರಾಮನಿಗೆ ಬಂಡವಾಳ ಹೂಡಲಿದ್ದಾರೆ. ನಾಯಕನ ಫಸ್ಟ್ ಲುಕ್ ಅನಾವರಣ ಮಾಡುವ ಮೂಲಕ ಚಿತ್ರತಂಡ ಅಧಿಕೃತವಾಗಿ ಪ್ರಾಜೆಕ್ಟ್ ಆರಂಭಿಸಿದೆ.
ಶಿಷ್ಯ ದೀಪಕ್, ಶರತ್ ಲೋಹಿತಾಶ್ವ ಮತ್ತು ಶೋಭ್ ರಾಜ್ ನಟಿಸಲಿದ್ದಾರೆ. ಉಳಿದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರತಂಡ ತೊಡಗಿದೆ. ಸೆಪ್ಟೆಂಬರ್ 29ರಂದು ಗಜರಾಮ ಮುಹೂರ್ತದೊಂದಿಗೆ ಚಿತ್ರೀಕರಣ ಪ್ರಾರಂಭವಾಗಲಿದೆ. ಮೊದಲ ಶೆಡ್ಯೂಲ್ ಬೆಂಗಳೂರಿನಲ್ಲಿ ನಡೆಯಲಿದೆ.
ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ, ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ ಗಜರಾಮ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.
ರಾಜವರ್ಧನ್ ಪ್ರಣಾಯಂ ಮತ್ತು ಹಿರಣ್ಣಯ್ಯ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ.
____

Be the first to comment