ರಾಜವರ್ಧನ್

ರಾಜವರ್ಧನ್ ಹೊಸ ಚಿತ್ರಕ್ಕೆ ಚಂದ್ರಚೂಡ್ ಆ್ಯಕ್ಷನ್ ಕಟ್

ರಾಜವರ್ಧನ್ ಉದ್ಯಮದಲ್ಲಿ ದೊಡ್ಡ ಆಶಯದೊಂದಿಗೆ ಸತತ ಪರಿಶ್ರಮ ಪಡ್ತಿರೋ 200% ಹೀರೋ ಮೆಟಿರಿಯಲ್… ಒಂದಷ್ಟು ಏಳು ಬೀಳುಗಳ ಆದ್ಮೇಲೆ ಇದೀಗ ಪಕ್ಕಾ ಈ ಸಲ ಗೆಲುವು ನಮ್ದೇ.. ಅನ್ನೋ ನಂಬಿಕೆ ಹುಟ್ಟಿಸಿರೋ ಕಥೆ ಮತ್ತು ತಂಡ ರಾಜವರ್ಧನ್ ಪಾಲಿಗೆ ಸಿಕ್ಕಿದೆ. ಅದ್ರಂತೆ ಬಹುಮುಖ ಪ್ರತಿಭೆ ಚಕ್ರವರ್ತಿ ಚಂದ್ರಚೂಡ್ ಔಟ್ ಅಂಡ್ ಔಟ್ ನಮ್ಮದೇ ಸೂಗಡಿನ ಮಾಸ್ ಎಂಟರ್ಟೈನ್ಮೆಂಟ್ ಆಗೋ ಕಥೆಯೊಂದನ್ನ ರಾಜವರ್ಧನ್ ಗಾಗಿಯೇ ಹೊತ್ತು ತಂದಿದ್ದಾರೆ…

ಹಲವು ತಿಂಗಳು ಗಳಿಂದ ಚರ್ಚೆಯಲ್ಲಿದ್ದ ಇವರಿಬ್ಬರು ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆಗೆ ಮೇ ತಿಂಗಳಲ್ಲಿ ಚಿತ್ರದ ಸಂಪೂರ್ಣ ವಿವರಗಳನ್ನ ಕೊಡಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಉದ್ಯಮದ ದಿಗ್ಗಜರಿಬ್ಬರು ಈ ಚಿತ್ರವನ್ನ ಲಾಂಚ್ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.

ರಾಜವರ್ಧನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!